ಕಲ್ಯಾಣ ಮಂಟಪಕ್ಕೆ ವಧು ಎಂಟ್ರಿ ನೀಡುವ ಸಾಕಷ್ಟು ತರಹದ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಕುದುರೆ ಏರಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವುದರಿಂದ ಟ್ರ್ಯಾಕ್ಟರ್ ಏರಿ ಬಂದ ವಧುವಿನವರೆಗೂ ನಾವು ನೋಡಿದ್ದೇವೆ. ಇದೀಗ ಆಂಧ್ರ ಪ್ರದೇಶದ ವಧುವೊಬ್ಬರು ವಿಭಿನ್ನ ರೀತಿಯಲ್ಲಿ ಮದುವೆಗೆ ಎಂಟ್ರಿಕೊಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.
ಎರಡು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ಪ್ರಶಾಂತಿ ಹಾಗೂ ಆಕೆಯ ಸಂಪೂರ್ಣ ಕುಟುಂಬ ವರ ಅಶೋಕನ ನಿವಾಸಕ್ಕೆ ದೋಣಿಯಲ್ಲಿ ತೆರಳಿದ್ದಾರೆ. ಆಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಪೆದಪಟ್ನಂಲಂಕಾದಲ್ಲಿ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ವಧು ದೋಣಿಯ ಮೂಲಕ ವರನ ನಿವಾಸಕ್ಕೆ ಬರಬೇಕಾಗಿ ಬಂದಿದೆ.
ಆಗಸ್ಟ್ನಲ್ಲಿ ಭಾರೀ ಮಳೆಯಾಗೋದ್ರಿಂದ ಜುಲೈನಲ್ಲಿಯೇ ವಿವಾಹವಾಗೋಣ ಎಂದು ಪ್ರಶಾಂತಿ ಮತ್ತು ಅಶೋಕ್ ನಿರ್ಧರಿಸಿದ್ದರು. ಆದರೆ ಮಳೆಯು ಜುಲೈ ತಿಂಗಳಲ್ಲಿಯೇ ಹೆಚ್ಚಾಗಿದೆ. ಆದರೂ ಚಿಂತೆ ಮಾಡದ ಪ್ರಶಾಂತಿ ದೋಣಿ ಏರಿ ಗಂಡನ ಮನೆ ತಲುಪಿದ್ದಾಳೆ.