alex Certify ಹೃದಯಾಘಾತದ ನಂತರ ವ್ಯಾಯಾಮ ಮಾಡುವುದು ಅಪಾಯಕಾರಿಯೇ…..? ಇಲ್ಲಿದೆ ತಜ್ಞರ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತದ ನಂತರ ವ್ಯಾಯಾಮ ಮಾಡುವುದು ಅಪಾಯಕಾರಿಯೇ…..? ಇಲ್ಲಿದೆ ತಜ್ಞರ ಸಲಹೆ

ಕೊರೊನಾ ನಂತರ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕೇವಲ ವಯಸ್ಸಾದವರು ಮಾತ್ರವಲ್ಲ, ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಆರೋಗ್ಯವಾಗಿರಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಬಯಸುವವರು ನಿಯಮಿತವಾಗಿ ವ್ಯಾಯಾಮ, ಯೋಗ ಮತ್ತು ಆರೋಗ್ಯಕರ ಆಹಾರಕ್ರಮವನ್ನು ಪಾಲಿಸಬೇಕು. ಒಮ್ಮೆ ಅಥವಾ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿರುವವರು ನಂತರ ವ್ಯಾಯಾಮ ಮಾಡಬಹುದೇ ಎಂಬ ಗೊಂದಲ ಕೂಡ ಅನೇಕರಲ್ಲಿರುತ್ತದೆ. ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ಎಂದು ತಿಳಿಯೋಣ.

ಹೃದಯಾಘಾತದ ನಂತರ ವ್ಯಾಯಾಮ ಮಾಡುವುದು ಪ್ರಯೋಜನಕಾರಿಯೇ?

ಹೃದಯಾಘಾತದ ನಂತರ ರೋಗಿಯು ತನ್ನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೃದಯಾಘಾತವಾದ ಕೆಲವು ದಿನಗಳ ನಂತರ ಲಘು ವ್ಯಾಯಾಮವನ್ನು ಮಾಡಿದರೆ, ಅದು ಪ್ರಯೋಜನಕಾರಿಯಾಗಿದೆ. ಇದನ್ನು ಮಾಡುವುದರಿಂದ, ದೈಹಿಕ ಚಟುವಟಿಕೆಯು ಸರಿಯಾಗಿ ಉಳಿಯುತ್ತದೆ. ಹೃದಯಾಘಾತದ ನಂತರ ಒಂದು ವರ್ಷದ ಕಾಲ ಅತಿಯಾದ ವ್ಯಾಯಾಮ ಮಾಡುವಂತಿಲ್ಲ. ಹೃದಯಾಘಾತದ ನಂತರ ದೈಹಿಕವಾಗಿ ಚಟುವಟಿಕೆಯಿಂದ ಇರದೇ ಇದ್ದರೆ ಕೂಡ ಅಪಾಯಕಾರಿ. ಅಂತಹ  ಸಾವಿನ  ಅಪಾಯವನ್ನು ಹೊಂದಿರುತ್ತಾರೆ.

ಯಾವ ರೀತಿಯ ವ್ಯಾಯಾಮ ಸೂಕ್ತ?

ಮೊದಲನೆಯದಾಗಿ ನೀವು ವ್ಯಾಯಾಮ ಮಾಡಲು ಬಯಸಿದರೆ, ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಬಳಿ ಕೇಳದೆ ಯಾವುದೇ ವ್ಯಾಯಾಮವನ್ನು ಮಾಡಬಾರದು. ಆರಂಭದಲ್ಲಿ ನಿಧಾನವಾಗಿ ವಾಕಿಂಗ್‌ ಮಾಡಬಹುದು. ಹೃದಯಾಘಾತದ ನಂತರ ಶ್ರಮದಾಯಕ ಮತ್ತು ಹೆಚ್ಚಿನ ತೀವ್ರತೆಯ ವ್ಯಾಯಾಮವನ್ನು ಮಾಡಬಾರದು, ಇದರಿಂದ ಹೃದಯಕ್ಕೆ ಹಾನಿಯಾಗಬಹುದು.

ಹೃದಯಾಘಾತದ ನಂತರ ರೋಗಿ ವಹಿಸಬೇಕಾದ ಕಾಳಜಿ…

ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸಿ. ನಿಧಾನವಾಗಿ ವಾಕಿಂಗ್‌ ಮಾಡುವುದು ಪ್ರಯೋಜನಕಾರಿಯಾಗಿದೆ. ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯ. ಉತ್ತಮ ಆಹಾರವು ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪು ಮತ್ತು ಎಣ್ಣೆ ಪದಾರ್ಥಗಳನ್ನು ಹೆಚ್ಚು ಸೇವಿಸಬೇಡಿ.  ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಕಾಲಕಾಲಕ್ಕೆ ಮೂತ್ರಪಿಂಡದ ಕಾರ್ಯ ಪರೀಕ್ಷೆ, ಇಸಿಜಿ ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಮಾಡಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...