alex Certify ಹೃದಯಸ್ಪರ್ಶಿಯಾಗಿದೆ ʼವಿಶ್ವ ತಾಯಂದಿರ ದಿನʼ ಕ್ಕೂ ಮುನ್ನ ಬಿಡುಗಡೆಗೊಂಡ ಈ ಜಾಹೀರಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಸ್ಪರ್ಶಿಯಾಗಿದೆ ʼವಿಶ್ವ ತಾಯಂದಿರ ದಿನʼ ಕ್ಕೂ ಮುನ್ನ ಬಿಡುಗಡೆಗೊಂಡ ಈ ಜಾಹೀರಾತು

Ahead Of Mother's Day, This Ad Is Winning The Internet. Here's Whyತಾಯಂದಿರ ದಿನಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಆದರೆ, ಕಂಪನಿಗಳು ಅಮ್ಮಂದಿರ ದಿನವನ್ನು ಆಚರಿಸುವ ಸಲುವಾಗಿ ಪ್ರಚಾರಗಳನ್ನು ಪ್ರಾರಂಭಿಸಿವೆ. ಅಂತಹ ಒಂದು ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ದೇಶಾದ್ಯಂತ ಎಲ್ಲಾ ಮಹಿಳಾ ವಿತರಣಾ ಪಾಲುದಾರರನ್ನು ಕೊಂಡಾಡುತ್ತಿದೆ.

ಯೂಟ್ಯೂಬ್‌ನಲ್ಲಿ ಅಮೆಜಾನ್‌ ಸಂಸ್ಥೆ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದೆ. ಮಹಿಳೆಯರು ತಮ್ಮ ಉದ್ಯೋಗಗಳನ್ನು ನಿರ್ವಹಿಸುವುದರ ಜೊತೆಗೆ ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಎಲ್ಲಾ ಡೆಲಿವರಿ ಮಹಿಳೆಯರ ಬಗ್ಗೆ ವಿಡಿಯೋದಲ್ಲಿ ಭಾವುಕವಾಗಿ ಚಿತ್ರಿಸಲಾಗಿದೆ. ಅವರು ಈ ಮಹಿಳೆಯರಿಗೆ ಸೂಪರ್ಮಾಮ್ಸ್ ಎಂದು ಹೆಸರಿಸಿದ್ದಾರೆ.

ಮಹಿಳೆಯರ ಒಡೆತನದ, ಮಹಿಳೆಯರಿಂದ ನಡೆಸಲ್ಪಡುವ, ಈ ಡೆಲಿವರಿ ನಿಲ್ದಾಣಗಳು ಆರ್ಥಿಕ ಸ್ವಾತಂತ್ರ್ಯದ ಮೂಲವನ್ನು ಒದಗಿಸುತ್ತವೆ. ಈ ಜಾಹೀರಾತನ್ನು ವಿಶಿಷ್ಟವಾಗಿ, ಮನೋಜ್ಞವಾಗಿ ಚಿತ್ರಿಸಲಾಗಿದ್ದು, ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗಿದೆ.

ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆ ಗೃಹಿಣಿ, ಶಿಕ್ಷಕಿ, ವೈದ್ಯೆ, ತಾಯಿ ಮತ್ತು ವಿತರಣಾ ಸಂಗಾತಿಯಾಗಬಹುದು. ಒಟ್ಟಿನಲ್ಲಿ ಮಹಿಳೆಯೊಬ್ಬಳೇ ಅಂತಾ ಮಹಿಳೆಯರ ಸಾಧನೆ ಬಗ್ಗೆ ಕೊಂಡಾಡಿದ್ದಾರೆ.

ಅಮೆಜಾನ್ ಭಾರತದಲ್ಲಿ ಐದು ಸಂಪೂರ್ಣ ಮಹಿಳಾ ವಿತರಣಾ ಕೇಂದ್ರಗಳನ್ನು ಹೊಂದಿದೆ. ತಮಿಳುನಾಡು, ಗುಜರಾತ್, ಕೇರಳ ಮತ್ತು ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ತೆರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...