alex Certify ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಿದ್ದ ಈ ಪದಾರ್ಥವೇ ಮಾರಕ; ಹೆಚ್ಚಿಸುತ್ತಿದೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಿದ್ದ ಈ ಪದಾರ್ಥವೇ ಮಾರಕ; ಹೆಚ್ಚಿಸುತ್ತಿದೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ!

ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದುಕೊಂಡಿದ್ದ ಆಹಾರವೊಂದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಮೀನಿನ ಎಣ್ಣೆಯ ಸಪ್ಲಿಮೆಂಟ್‌ ಹೃದ್ರೋಗದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನವು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.

ಮೀನಿನ ಎಣ್ಣೆಯ ಪೂರಕಗಳು ಹೃದಯದ ಆರೋಗ್ಯಕ್ಕೆ ಹಾನಿಕಾರಕ ಎನ್ನುತ್ತಾರೆ ಸಂಶೋಧಕರು. ಇದರಿಂದಾಗಿಯೇ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯಕಾರಿ ಹೃದಯ ರಕ್ತನಾಳದ ಕಾಯಿಲೆಗಳು ಜಾಸ್ತಿಯಾಗಬಹುದು. ಇದು ಮಾರಣಾಂತಿಕವೂ ಆಗಬಹುದು.

ಪ್ರತಿದಿನ ಮೀನಿನ ಎಣ್ಣೆಯ ಪೂರಕಗಳನ್ನು ಸೇವಿಸುವವರಿಗೆ ಇತರರಿಗಿಂತ 5 ಪ್ರತಿಶತದಷ್ಟು ಹೆಚ್ಚಿನ ಪಾರ್ಶ್ವವಾಯು ಅಪಾಯವಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಏಟ್ರಿಯಲ್‌ ಫೈಬ್ರಿಲೇಶನ್‌ ಅಪಾಯ ಕೂಡ 13 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಇದು ಹೃದಯ ಬಡಿತ ಹೆಚ್ಚಳ ಮತ್ತು ಎದೆಯ ಅಸ್ವಸ್ಥತೆಯನ್ನು ಉಂಟುಮಾಡಬಲ್ಲ ಸಮಸ್ಯೆ. ಆಮ್ಲಜನಕಯುಕ್ತ ರಕ್ತವು ಮೆದುಳಿಗೆ ಸರಿಯಾಗಿ ತಲುಪುವುದಿಲ್ಲ, ಇದರಿಂದಾಗಿ ಮೆದುಳಿನ ಜೀವಕೋಶಗಳು ಹಾನಿಗೊಳಗಾಗಲು ಪ್ರಾರಂಭಿಸುತ್ತವೆ.

ಬ್ರಿಟಿಷ್ ಸಂಶೋಧಕರು ಒಟ್ಟು 4.15 ಲಕ್ಷ ಜನರನ್ನು ವಿಶ್ಲೇಷಿಸಿ ಮೀನಿನ ಎಣ್ಣೆಯ ಸಪ್ಲಿಮೆಂಟ್‌ಗಳ ಅನಾನುಕೂಲಗಳನ್ನು ಪತ್ತೆ ಮಾಡಿದ್ದಾರೆ. ಆರೋಗ್ಯವಂತ ಜನರು ಇವುಗಳನ್ನು ಸೇವಿಸಬಾರದು ಎಂಬುದು ವಿಜ್ಞಾನಿಗಳ ಸಲಹೆ.

ಅಮೆರಿಕದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 20 ಪ್ರತಿಶತ ಜನರು ಮೀನಿನ ಎಣ್ಣೆಯ ಪೂರಕಗಳನ್ನು ಬಳಸುತ್ತಾರೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅವರ ನಂಬಿಕೆ. ಆದರೆ ಆರೋಗ್ಯವಂತ ಜನರಲ್ಲಿ ಇದು ಪಾರ್ಶ್ವವಾಯು ಮತ್ತು ಅನೇಕ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೀನಿನ ಎಣ್ಣೆ ಅಥವಾ ಅದರಿಂದ ತಯಾರಿಸಿದ ಪೂರಕಗಳನ್ನು ವೈದ್ಯರ ಸಲಹೆಯಿಲ್ಲದೆ ಸೇವಿಸಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...