
ಶೂಟ್ ದಿ ಹೀರೋ ಮತ್ತು ಹವಾಯಿ ಫೈವ್-0 ಚಿತ್ರಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟರ್ನ್ ಬ್ಯಾಕ್ ನೌ, ಸೈ-ಫೈಟರ್ ಮತ್ತು ಮೆಕ್ಸಿಕನ್ ಗೋಲ್ಡ್‌ನಲ್ಲೂ ಅಭಿನಯಿಸಿದ್ದಾರೆ.
ಇನ್ನು ಹೃತಿಕ್ ರೋಷನ್ ಮುಂಬರಲಿರುವ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಫೈಟರ್ ಎಂಬ ಆಕ್ಷನ್ ಸಿನಿಮಾದಲ್ಲಿ ಹೃತಿಕ್ ರೋಷನ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಹೃತಿಕ್ ರೋಷನ್ ಕೊನೆಯ ಬಾರಿಗೆ ಟೈಗರ್ ಶ್ರಾಫ್ ಮತ್ತು ವಾಣಿ ಕಪೂರ್ ಜೊತೆ ನಟಿಸಿದ ಬ್ಲಾಕ್ ಬಸ್ಟರ್ ಹಿಟ್ ‘ವಾರ್’ನಲ್ಲಿ ಅಭಿನಯಿಸಿದ್ದರು. ಅದೇ ವರ್ಷ, ಅವರು 2019 ರಲ್ಲಿ ಬಿಡುಗಡೆಯಾದ ಸೂಪರ್- 30 ಚಿತ್ರದಲ್ಲಿ ನಟಿಸಿದ್ದಾರೆ.
