alex Certify ಹೂವಿನ ಹಾರ ಹಾಕಲಾದ ಮೊನಾಲಿಸಾ ಭಾವಚಿತ್ರ ಪೂಜಿಸಿದ ಯುವತಿ; ವೈರಲ್ ವಿಡಿಯೋ ನೋಡಿ ನೆಟ್ಟಿಗರು ಕಕ್ಕಾಬಿಕ್ಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂವಿನ ಹಾರ ಹಾಕಲಾದ ಮೊನಾಲಿಸಾ ಭಾವಚಿತ್ರ ಪೂಜಿಸಿದ ಯುವತಿ; ವೈರಲ್ ವಿಡಿಯೋ ನೋಡಿ ನೆಟ್ಟಿಗರು ಕಕ್ಕಾಬಿಕ್ಕಿ..!

ಭಾರತೀಯ ಧಾರಾವಾಹಿಗಳು, ಜಾಹೀರಾತುಗಳ ವಿಲಕ್ಷಣತೆಗೆ ಸರಿಸಾಟಿಯಿಲ್ಲ. ಇವು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಮೀಮ್‌ಗಳ ಸುರಿಮಳೆ ಸಂಭವಿಸಲು ಕಾರಣವಾಗುತ್ತದೆ.

ಇದೀಗ, ಬಂಗಾಳಿ ಸೋಪ್ ಒಪೆರಾದ ದೃಶ್ಯವೊಂದು ಜನರ ನಿದ್ದೆಗೆಡಿಸಿದೆ. ಹಾಸ್ಯಾಸ್ಪದ ದೃಶ್ಯದಲ್ಲಿ ಮಹಿಳೆಯೊಬ್ಬರು ಹೂವಿನ ಹಾರ ಹಾಕಲಾಗಿರುವ ಮೊನಾಲಿಸಾ ಭಾವಚಿತ್ರವನ್ನು ಪೂಜಿಸುವ ದೃಶ್ಯವನ್ನು ತೋರಿಸಿದೆ. ಅಷ್ಟೇ ಅಲ್ಲ ಆಕೆ, ಕೆಲವು ಅಗರಬತ್ತಿ ಹೊತ್ತಿಸಿ, ಭಾವಚಿತ್ರವನ್ನು ಪೂಜಿಸಿದ್ದಾಳೆ.

ಈ ದೃಶ್ಯವು ಗೌರಿ ಎಲೋ ಎಂಬ ಬಂಗಾಳಿ ದೈನಂದಿನ ಸೋಪ್‌ನದ್ದು ಎಂದು ನೆಟ್ಟಿಗರು ಹೇಳಿಕೊಳ್ಳುತ್ತಾರೆ. ಏನು ನಡೆಯುತ್ತಿದೆ ಎಂಬುದು ಖಚಿತವಾಗಿಲ್ಲ. ಕಾರ್ಯಕ್ರಮದ ತಯಾರಕರು ಈ ಕಾರ್ಯಕ್ರಮದ ಹಿಂದಿನ ತರ್ಕದ ಬಗ್ಗೆ ತಿಳುವಳಿಕೆ ನೀಡಿದರೆ ಒಳ್ಳೆಯದು ಎಂದು ನೆಟ್ಟಿಗರು ತಿಳಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಿಂದ ದೇಸಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ದೃಶ್ಯ ನೋಡಿ ನೆಟ್ಟಿಗರು ಮೂಕವಿಸ್ಮಿತರಾದಂತೆ ಪೋಸ್ಟ್ ಮಾಡಲಾಗಿದೆ. ಈ ಹಿಂದೆ ವೈರಲ್ ಆಗಿರೋ ಕಾರ್ಯಕ್ರಮವೊಂದರ ದೃಶ್ಯದ ಪೈಕಿ, ವರನೊಬ್ಬ ತನ್ನ ಮದುವೆಯ ರಾತ್ರಿ ಹಾಲಿನೊಂದಿಗೆ ಜಿರಳೆಯನ್ನು ನುಂಗುತ್ತಿರುವ ದೃಶ್ಯ ವೈರಲ್ ಆಗಿತ್ತು.

— Aparna (@chhuti_is) April 20, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...