alex Certify ‘ಹುಟ್ಟುಹಬ್ಬ’ ದ ದಿನದಂದೇ ಸಾವಿಗೆ ಶರಣಾದ ಉಪನ್ಯಾಸಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹುಟ್ಟುಹಬ್ಬ’ ದ ದಿನದಂದೇ ಸಾವಿಗೆ ಶರಣಾದ ಉಪನ್ಯಾಸಕಿ

ಹುಟ್ಟುಹಬ್ಬದ ದಿನದಂದೇ ಉಪನ್ಯಾಸಕಿಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕಿಯಾಗಿದ್ದ 26 ವರ್ಷದ ಚಂದನಾ ಮೃತಪಟ್ಟವರಾಗಿದ್ದು, ಇವರು ಕಾಲೇಜು ಆವರಣದಲ್ಲಿಯೇ ಇರುವ ಹಾಸ್ಟೆಲ್ ನಲ್ಲಿ ಮಂಗಳವಾರ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ಚಂದನಾ ಅವರ ಹುಟ್ಟುಹಬ್ಬವಿದ್ದು, ಸಹೋದ್ಯೋಗಿಗಳು ವಿಶ್ ಮಾಡಿದ್ದಾರೆ. ಬಳಿಕ ತಿಂಡಿಗೆ ಕರೆದ ವೇಳೆ ಈಗ ಮೂಡ್ ಸರಿ ಇಲ್ಲ ಆಮೇಲೆ ಬರುತ್ತೇನೆ ಎಂದು ಹೇಳಿ ತಮ್ಮ ಕೋಣೆಗೆ ತೆರಳಿದ್ದಾರೆ.

ಆದರೆ ನಂತರ ಎಷ್ಟು ಹೊತ್ತಾದರೂ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಕಂಡು ಬಂದಿದೆ. ಸಾಯುವ ಮುನ್ನ ಚಂದನಾ ಡೆತ್ ನೋಟ್ ಸಹ ಬರೆದಿಟ್ಟಿದ್ದು ನನ್ನ ಸಾವಿಗೆ ಯಾರೂ ಕಾರಣರಲ್ಲ. ಒತ್ತಡದಿಂದಾಗಿ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...