
ನಟಿ ಸಂಯುಕ್ತಾ ಹೆಗ್ಡೆ ಇಂದು ತಮ್ಮ 23ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಂಯುಕ್ತಾ ಹೆಗ್ಡೆ 2016ರಲ್ಲಿ ತೆರೆಕಂಡ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಸಂಯುಕ್ತ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ನಂತರ ‘ಕಾಲೇಜ್ ಕುಮಾರ್’ ಚಿತ್ರದಲ್ಲಿ ಅಭಿನಯಿಸಿದರು. ಕನ್ನಡದ ‘ಕಿರಿಕ್ ಪಾರ್ಟಿ’ ರಿಮೇಕ್ ಆದ ತೆಲುಗಿನ ‘ಕಿರ್ರಾಕ್’ ಪಾರ್ಟಿ’ ಸಿನಿಮಾದಲ್ಲಿ ಸತ್ಯ ಎಂಬ ಪಾತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಗೂ ಎಂಟ್ರಿ ಕೊಟ್ಟರು.
ಟೋಕಿಯೋ ಒಲಂಪಿಕ್ಸ್: ಚಿನ್ನಕ್ಕಾಗಿ ಮಹಾರಾಷ್ಟ್ರದ ಎಂಟು ಆಟಗಾರರ ಸೆಣೆಸಾಟ
ನಟಿ ಸಂಯುಕ್ತಾ ಹೆಗ್ಡೆ ಕನ್ನಡ ಮಾತ್ರವಲ್ಲದೆ ತಮಿಳಿನ ಕೆಲ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಸಂಯುಕ್ತ ಹೆಗ್ಡೆ ಇತ್ತೀಚೆಗೆ ‘ತುರ್ತು ನಿರ್ಗಮನ’ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ.