alex Certify ಹಿರಿಯ ನಟ ಪ್ರೇಮ್‌ ಛೋಪ್ರಾ ಸಾವಿನ ವದಂತಿ; ಇಲ್ಲಿದೆ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಟ ಪ್ರೇಮ್‌ ಛೋಪ್ರಾ ಸಾವಿನ ವದಂತಿ; ಇಲ್ಲಿದೆ ಅಸಲಿ ಸತ್ಯ

ಬಾಲಿವುಡ್‌ನ ಹಿರಿಯ ನಟ ಪ್ರೇಮ್‌ ಛೋಪ್ರಾ ನಿಧನದ ಬಗ್ಗೆ ವದಂತಿಗಳು ಹಬ್ಬಿವೆ. ರಾಕೇಶ್‌ ರೋಶನ್‌, ಅಮೋದ್‌ ಮೆಹ್ರಾ ಸೇರಿದಂತೆ ಚಿತ್ರರಂಗದ ದಿಗ್ಗಜರೆಲ್ಲ ಕರೆ ಮಾಡಿ, ಪ್ರೇಮ್‌ ಛೋಪ್ರಾ ಬದುಕಿದ್ದಾರೋ ಇಲ್ಲವೋ ಅನ್ನೋದನ್ನು ಖಚಿತಪಡಿಸಿಕೊಳ್ತಿದ್ದಾರಂತೆ. ಖುದ್ದು ಪ್ರೇಮ್‌ ಛೋಪ್ರಾ ಅವರೇ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಪ್ರೇಮ್‌ ಛೋಪ್ರಾ ಮತ್ತವರ ಪತ್ನಿ ಉಮಾ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ಚಿಕಿತ್ಸೆಯ ಬಳಿಕ ಡಿಸ್ಚಾರ್ಜ್‌ ಆಗಿದ್ದರು.

ತಮ್ಮ ಸಾವಿನ ಬಗ್ಗೆ ಸುಳ್ಳು ವದಂತಿ ಹಬ್ಬಿಸುತ್ತಿರುವುದು ನಿಜಕ್ಕೂ ದುಃಖದ ಸಂಗತಿ. ಜನರಿಗೆ ತಪ್ಪು ಸುದ್ದಿ ತಿಳಿಸುವ ಮೂಲಕ ಯಾರೋ ಪೈಶಾಚಿಕ ಆನಂದ ಪಡೆಯುತ್ತಿದ್ದಾರೆ ಅಂತಾ ಪ್ರೇಮ್‌ ಛೋಪ್ರಾ ಹೇಳಿದ್ದಾರೆ. ತಾವು ಸಂಪೂರ್ಣ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.

ಬೆಳಗ್ಗೆಯಿಂದಲೂ ಪ್ರೇಮ್‌ ಛೋಪ್ರಾಗೆ ಸಾಕಷ್ಟು ಫೋನ್‌ ಕರೆಗಳು ಬರುತ್ತಿವೆಯಂತೆ. ಕೆಲ ತಿಂಗಳುಗಳ ಹಿಂದೆ ನಟ ಜಿತೇಂದ್ರ ಇನ್ನಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿತ್ತು. ನಿಜಕ್ಕೂ ಈ ಬೆಳವಣಿಗೆಗಳು ಕಳವಳಕಾರಿ ಅಂತಾ ಪ್ರೇಮ್‌ ಛೋಪ್ರಾ ಹೇಳಿದ್ದಾರೆ.

ಪ್ರೇಮ್‌ ಛೋಪ್ರಾ 70ರ ದಶಕದಲ್ಲಿ ಸಾಕಷ್ಟು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರು. ನಟ ರಾಜೇಶ್‌ ಖನ್ನಾರೊಂದಿಗೆ 19 ಚಿತ್ರಗಳಲ್ಲಿ ಇವರು ಅಭಿನಯಿಸಿದ್ದಾರೆ. ಕಳೆದ ವರ್ಷ ರಿಲೀಸ್‌ ಆಗಿದ್ದ ಬಂಟಿ ಔರ್‌ ಬಬ್ಲಿ 2 ಚಿತ್ರದಲ್ಲೂ ನಟಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...