ಹಿಜಾಬ್ ವಿಚಾರವಾಗಿ ರಾಜ್ಯವನ್ನು ಟೀಕಿಸಿದ ಮಲಾಲಾಗೆ ಟಾಂಗ್ ಕೊಟ್ಟ ಸಿ.ಟಿ. ರವಿ…..! 09-02-2022 11:47AM IST / No Comments / Posted In: Karnataka, Latest News, Live News ರಾಜ್ಯದಲ್ಲಿ ಹಿಜಾಬ್ ವಿವಾದ ತೀವ್ರಗೊಳ್ಳುತ್ತಿರುವ ಬೆನಲ್ಲೇ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ಜಾಯ್ ಕರ್ನಾಟಕದ ಈ ಪರಿಸ್ಥಿತಿಯನ್ನು ’ಭಯಾನಕ’ ಎಂದು ಬಣ್ಣಿಸಿದ್ದಾರೆ. ಟ್ವಿಟರ್ನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರ ವಿವಾದದ ಕುರಿತು ಆಕ್ರೋಶ ಹೊರಹಾಕಿದ ಮಲಾಲಾ ಹಿಜಬ್ ಧರಿಸುವ ಯುವತಿಯರಿಗೆ ತರಗತಿಗಳಿಗೆ ಹಾಜರಾಗಲು ವಿರೋಧ ಸೂಚಿಸುತ್ತಿರುವದನ್ನು ಖಂಡಿಸಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಹಾಗೂ ಹಿಜಬ್ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಿದೆ. ಶಾಲೆಗಳಲ್ಲಿ ಹಿಜಬ್ ಧರಿಸಿ ಓಡಾಡಲು ಅಡ್ಡಿ ಮಾಡುತ್ತಿರುವುದು ನಿಜಕ್ಕೂ ಭಯಾನಕ ಎನಿಸಿದೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕಿದೆ ಎಂದು ಮಲಾಲಾ ಟ್ವೀಟಾಯಿಸಿದ್ದಾರೆ. ಮಲಾಲಾ ಯುಸೂಫ್ಜಾಯ್ರ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಇದಕ್ಕೆ ಟ್ವಿಟರ್ ಮೂಲಕವೇ ಟಾಂಗ್ ನೀಡಿದ ಬಿಜೆಪಿ ಶಾಸಕ ಹಾಗೂ ಪಕ್ಷದ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಸಿ.ಟಿ ರವಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಈ ಮುಲ್ಲಾ ಯಾರು..? ಈಕೆಯೂ ಬುರ್ಕಾದ ಹಿಂದೆ ಅಡಗಿ ಇರಬೇಕಿತ್ತಲ್ಲವೇ..? ಎಂದು ವ್ಯಂಗ್ಯವಾಡಿದ್ದಾರೆ . Who is this MOOLAH interfering in the internal affairs of India? Shouldn't she be hiding behind her burqa? https://t.co/SImk1yIE1j — C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) February 8, 2022