ನೇಪಾಳದಲ್ಲಿ ನವೆಂಬರ್ 20ರಂದು ಲೋಕಸಭಾ ಚುನಾವಣೆ ನಡೆಯುತ್ತಿದ್ದು, ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ಶತಾಯುಷಿಯೊಬ್ಬರು ಚುನಾವಣಾ ಕಣಕ್ಕಿಳಿದಿದ್ದಾರೆ.
ಗೋರ್ಖಾ ಜಿಲ್ಲೆಯವರಾದ ಶತಾಯುಷಿ ಟಿಕಾ ದತ್ತಾ ಪೊಖರೆಲ್, ನೇಪಾಳಿ ಕಾಂಗ್ರೆಸ್ (ಬಿಪಿ) ಪಕ್ಷದ ಅಭ್ಯರ್ಥಿಯಾಗಿ ಗೋರ್ಖಾ 2 ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಸ್ವಾರಸ್ಯಕರ ಸಂಗತಿ ಎಂದರೆ ಚುನಾವಣಾ ಆಯೋಗವು ಇವರ ಹೆಸರನ್ನು ದಾಖಲಿಸುವ ವೇಳೆ ಅವರಿಗೆ 99 ವರ್ಷವಾಗಿತ್ತು. ಸೋಮವಾರದಂದು ಅವರು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸುವುದು ನನ್ನ ಗುರಿ ಎಂದು ಅವರು ಹೇಳಿದ್ದಾರೆ.