ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಕರೆತನ್ನಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಯು.ಟಿ.ಖಾದರ್, ಕಟೀಲ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರೆ ಒಳ್ಳೆಯದು ಎಂದಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಖಾದರ್, ಕಾಂಗ್ರೆಸ್ ನವರ ಬದ್ಧತೆ, ಶಕ್ತಿ ಕಟೀಲ್ ಗೆ ಗೊತ್ತಿದೆ. ಈ ಹಿಂದೆ ಕಟೀಲ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದವರು. ಎನ್ ಎಸ್ ಯು ಐ ನಲ್ಲಿ ವಿನಯ್ ಸೊರಕೆ ಪರ ದುಡಿದವರು ಕಟೀಲ್. ಪಾಪ ಹಿಂದಿನದ್ದೆಲ್ಲಾ ಕಟೀಲ್ ಗೆ ನೆನಪಾಗುತ್ತಿರಬೇಕು ಎಂದು ತಿರುಗೇಟು ನೀಡಿದ್ದಾರೆ.
ವೈದ್ಯೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ ಕಾಂಪೌಂಡರ್..! ಹಣಕ್ಕೆ ಬೇಡಿಕೆ ಇಡಲು ಹೋಗಿ ಈಗ ಪೊಲೀಸರ ಅತಿಥಿ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರ ಚರಿತ್ರೆಯನ್ನು ಮೊದಲು ನೋಡಲಿ. ಬಿಜೆಪಿಯಲ್ಲಿ ಅವರ ಸ್ಥಿತಿ ಏನಾಗಿದೆ ಎಂಬುದನ್ನು ಯೋಚಿಸಿ. ಕಾಂಗ್ರೆಸ್ ಮುಕ್ತಗೊಳಿಸುವ ಅನಗತ್ಯ ಯೋಜನೆ ಬೇಡ. ಈಗಾಗಲೇ ಬಿಜೆಪಿ ಸೇರಿದವರ ಪರಿಸ್ಥಿತಿ ಅತಂತ್ರವಾಗಿರುವಾಗ ನಮ್ಮ ಪಕ್ಷದವರ ಬಗ್ಗೆ ಕಟೀಲ್ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.