ಹೊರಗಿನಿಂದ ತಂದ ಹಾಲು ಕುದಿಸುವಾಗ ಹಾಳಾದರೆ ಚಿಂತಿಸದಿರಿ. ಹಾಳಾದ ಹಾಲಿನಿಂದಲೂ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ..?
ಪಿಜ್ಜಾ ತಯಾರಿಸಲು ಬಳಸುವ ಚೀಸ್ ತಯಾರಿಗೆ ಹಾಲನ್ನು ಒಡೆಯಲಾಗುತ್ತದೆ. ಹಾಗಾಗಿ ನಿಮ್ಮ ಒಡೆದ ಹಾಲಿನಿಂದ ಇದನ್ನು ತಯಾರಿಸಬಹುದು. ಯೂಟ್ಯೂಬ್ ಗಳಲ್ಲಿ ಸಿಗುವ ವಿಡಿಯೋಗಳಿಂದ ಹಲವು ಬಗೆಯ ಪಿಜ್ಜಾ ತಯಾರಿಯನ್ನೂ ಕಲಿಯಬಹುದು.
ಬೇಕರಿಗಳಲ್ಲಿ ತಯಾರಿಸುವ ಕೇಕ್, ಬ್ರೆಡ್ ಮತ್ತಿತರ ಸಿಹಿ ತಿಂಡಿಗಳಿಗೆ ಒಡೆದ ಹಾಲಿನ ಅಗತ್ಯವಿದೆ. ಒಡೆದಾಕ್ಷಣ ಹುಳಿಯಾಗುವ ಈ ಹಾಲು ಬೇಯಿಸಿದ ಬಳಿಕ ಬೇರೆಯೇ ರುಚಿ ಪಡೆದುಕೊಳ್ಳುತ್ತದೆ.
ಆಹಾರದ ಹೊರತಾಗಿ ಒಡೆದ ಹಾಲನ್ನು ತ್ವಚೆಯ ಮೇಲೆ ಹಚ್ಚಿ ಹಾಗೆಯೇ ಒಣಗಲು ಬಿಡಿ. ಇದರ ವಾಸನೆ ತುಸು ಕಷ್ಟ ಎನಿಸಿದರೂ ನಿಮ್ಮ ತ್ವಚೆಯ ಮೇಲೆ ಅದ್ಭುತ ಪರಿಣಾಮವನ್ನೇ ಬೀರುತ್ತದೆ. ಲ್ಯಾಕ್ಟಿಕ್ ಆಮ್ಲ ನಿಮ್ಮ ತ್ವಚೆಗೆ ಆರೋಗ್ಯ ಮತ್ತು ಹೊಳಪನ್ನು ದಯಪಾಲಿಸುತ್ತದೆ.