ಹಾಲು ಸಂಪೂರ್ಣ ಆಹಾರವಾಗಿದ್ದು ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಆದ್ದರಿಂದಲೇ ನಮ್ಮ ಪೋಷಕರು ಬಾಲ್ಯದಿಂದಲೂ ಹಾಲು ಕುಡಿಯುವಂತೆ ಸಲಹೆ ನೀಡುತ್ತಾರೆ. ಈ ನೈಸರ್ಗಿಕ ಪಾನೀಯವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅನೇಕ ರೋಗಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ. ಆದರೆ ಎಲ್ಲರೂ ಹಾಲು ಕುಡಿಯಲು ಇಷ್ಟಪಡುವುದಿಲ್ಲ.
ಹಾಲು ಕುಡಿಯದೇ ಇದ್ದರೆ ಕ್ಯಾಲ್ಷಿಯಂ ಕೊರತೆ ಉಂಟಾಗಬಹುದು ಎಂಬ ಆತಂಕ ಸಹಜ. ಹಾಗಾಗಿ ಹಾಲು ಸೇವನೆ ಮಾಡದೇ ಇರುವವರು ದೇಹದಲ್ಲಿನ ಕ್ಯಾಲ್ಸಿಯಂನ ಅಗತ್ಯವನ್ನು ಪೂರೈಸಿಕೊಳ್ಳಲು ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ನೆಚ್ಚಿಕೊಳ್ಳಬೇಕು. ಹಾಲು ಹೊರತುಪಡಿಸಿ ಕ್ಯಾಲ್ಸಿಯಂನ ಇತರ ಸಮೃದ್ಧ ಮೂಲಗಳು ಯಾವುವು ಅನ್ನೋದನ್ನು ನೋಡೋಣ.
ಕಿತ್ತಳೆ: ಕಿತ್ತಳೆ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಿತ್ತಳೆ ಹಣ್ಣಿನ ರಸವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇರುವುದಿಲ್ಲ.
ಓಟ್ಸ್: ನಾವು ಸಾಮಾನ್ಯವಾಗಿ ಬೆಳಗಿನ ಉಪಾಹಾರದಲ್ಲಿ ಸೇವಿಸುವ ಅತ್ಯಂತ ಆರೋಗ್ಯಕರ ಆಹಾರ ಓಟ್ಸ್. ಇದು ದೇಹವನ್ನು ಬಲಪಡಿಸುವ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಆದ್ದರಿಂದ ನೀವು ಹಾಲು ಸೇವಿಸದೇ ಇದ್ದರೆ ಓಟ್ಸ್ ಅನ್ನು ಬಳಕೆ ಮಾಡಿ.
ಸೂರ್ಯನ ಬೆಳಕು: ವಿಟಮಿನ್ ಡಿ ಪಡೆಯಲು ಪ್ರತಿಯೊಬ್ಬರೂ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ಸೂರ್ಯನ ಬೆಳಕಿಗೆ ಒಡ್ಡಿಕೊಂಡರೆ ಕ್ಯಾಲ್ಸಿಯಂ ಕೊರತೆ ಕೂಡ ನಿವಾರಣೆಯಾಗುತ್ತದೆ.
ಹಸಿರು ಎಲೆಗಳ ತರಕಾರಿ: ಹಸಿರು ಎಲೆಗಳ ತರಕಾರಿಗಳು ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇತರ ಪ್ರಮುಖ ಪೋಷಕಾಂಶಗಳ ಹೊರತಾಗಿ ಇವುಗಳಿಂದ ಕ್ಯಾಲ್ಸಿಯಂ ಅನ್ನು ಸಹ ಪಡೆಯಬಹುದು. ನಿಮ್ಮ ದೈನಂದಿನ ಆಹಾರದಲ್ಲಿ ಪಾಲಕ್, ಟರ್ನಿಪ್ ಎಲೆಗಳನ್ನು ಸೇರಿಸಿಕೊಳ್ಳಿ.