ಅಡುಗೆ ಮನೆಯ ಅತಿ ಅಗತ್ಯ ಪದಾರ್ಥಗಳಲ್ಲಿ ಹಾಲು ಮೊದಲನೆಯದು ಬೆಳಗ್ಗೆ ಮತ್ತು ಸಂಜೆ ಕಾಫಿ ಟೀ ಕುಡಿಯುವವರಿಗೆ ಹಾಲು ಬೇಕೇ ಬೇಕು. ಹಾಲು ಜೋಪಾನ ಮಾಡಲೆಂದೆ, ಫ್ರಿಜ್ ಖರೀದಿಸುವವರಿದ್ದಾರೆ.
ಫ್ರಿಡ್ಜ್ ನಲ್ಲಿ ಹಾಲನ್ನು ಇಟ್ಟರೆ ಬಹಳ ಬೇಗ ಕೆಡುವುದಿಲ್ಲ, ಅನ್ನೋದೇ ಇದರ ಉದ್ದೇಶ. ಫ್ರಿಡ್ಜ್ ಬಳಸದೆ ಇರುವ ಜನರು ಹಾಲನ್ನು ದಿನಕ್ಕೆ ಮೂರು ಬಾರಿಯಾದರೂ ಕಾಯಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಎಷ್ಟೇ ಮುತುವರ್ಜಿ ವಹಿಸಿದರು ಕೆಲವೊಮ್ಮೆ ಹಾಲು ಒಡೆದು ಹೋಗುವುದುಂಟು. ಇದಕ್ಕೆ ಹಲವಾರು ಕಾರಣ. ಹಾಲಿನ ಪಾತ್ರೆ ಸರಿಯಾಗಿ ಸ್ವಚ್ಛಗೊಳಿಸದೇ ಇದ್ದಾಗ, ಸ್ವಲ್ಪ ಹಳೆಯ ಹಾಲಿನ ಪ್ಯಾಕೆಟ್ ಖರೀದಿಸಿ ತಂದಾಗ ಹಾಲು ಒಡೆದು ಹೋಗಬಹುದು.
ಹಾಲು ಇನ್ನೇನು ಒಡೆಯಬಹುದು ಎಂಬ ಸೂಚನೆ ಸರಿಯಾಗಿ ಗಮನಿಸಿದರೆ ಸ್ವಲ್ಪ ಮೊದಲೇ ಗೊತ್ತಾಗಬಹುದು. ಹುಳಿ ವಾಸನೆ ಬರುವುದು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟಾಗ, ಬಿಸಿ ಆಗುತ್ತಿರುವಾಗಲೇ ಬುಗ್ಗೆ ಏಳುವುದು ಹೀಗೆ.
ಇಂತಹ ಸಂದರ್ಭದಲ್ಲಿ ಅಂದರೆ ಹಾಲು ಓಡೆದೇ ಹೋಗಬಹುದು ಎಂಬ ಖಾತ್ರಿ ಇದ್ದಾಗ, ಹಾಲು ಕಾಯಿಸಲು ಇಟ್ಟಾಗ ಚಿಟಿಕೆ ಅಡಿಗೆ ಸೋಡಾ ಹಾಕಿಬಿಡಿ. ಆಗ ಹಾಲು ಓಡೆದುಹೋಗುವ ರಗಳೆ ಇರುವುದಿಲ್ಲ.