ಸೆಕ್ಸ್ ಸುಖ ಹೆಚ್ಚಿಸಿಕೊಳ್ಳಲು ಕೆಲವರು ವಯಾಗ್ರ ಸೇವನೆ ಮಾಡ್ತಾರೆ. ನಮ್ಮ ಅಡುಗೆ ಮನೆಯಲ್ಲಿಯೇ ಲೈಂಗಿಕತೆ ಬಲಪಡಿಸುವ ವಸ್ತುವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಲಿನ ಜೊತೆ ಇವುಗಳನ್ನು ಬೆರೆಸಿ ಸೇವನೆ ಮಾಡಿದ್ರೆ ಲೈಂಗಿಕ ಶಕ್ತಿ ಹೆಚ್ಚಾಗಿ, ಸಂಭೋಗ ಸುಖ ದುಪ್ಪಟ್ಟಾಗುತ್ತದೆ.
ನಿಮಗೆ ಆಶ್ಚರ್ಯವಾಗಬಹುದು, ಹಾಲು ಕೇವಲ ನಿಮ್ಮ ಅರೋಗ್ಯ ವೃದ್ಧಿ ಮಾತ್ರ ಮಾಡುವುದಿಲ್ಲ, ಲೈಂಗಿಕ ಆರೋಗ್ಯಕ್ಕೂ ಬಹಳ ಒಳ್ಳೆಯದು. ಹಾಲಿಗೆ ಆಲದ ಮರದ ತೊಗಟೆ ಪುಡಿಯನ್ನು ಮೂರು ಚಮಚ ಹಾಕಿ ಕುಡಿದ್ರೆ ಪರಿಣಾಮಕಾರಿ. ಇದು ವಯಾಗ್ರದ ರೀತಿ ಕೆಲಸ ಮಾಡುತ್ತದೆ.
ಒಂದು ಕಪ್ ಹಾಲಿಗೆ ಒಂದು ಚಮಚ ಹಸಿ ಶುಂಠಿ ತುರಿದು ಹಾಕಿ ಕುದಿಸಿ. 15 ರಿಂದ 20 ನಿಮಿಷಗಳ ಕಾಲ ಹಾಲನ್ನು ಕುದಿಸಿ. ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಿ. ಕೆಲವೇ ದಿನಗಳಲ್ಲಿ ನೀವು ಪರಿಣಾಮ ಕಾಣಬಹುದು.
ಪ್ರತಿ ದಿನ ಕೇಸರಿ ಸೇವನೆ ಹಾಸಿಗೆ ಮೇಲೆ ಉತ್ತಮ ಪ್ರದರ್ಶನ ತೋರಲು ನೆರವಾಗಲಿದೆ. ಒತ್ತಡ ಕಡಿಮೆ ಮಾಡಿ, ನಿಮ್ಮ ಉತ್ಸಾಹ ಹೆಚ್ಚಿಸುವ ಕೆಲಸವನ್ನು ಕೇಸರಿ ಮಾಡುತ್ತದೆ. ಬಿಸಿ ಹಾಲಿಗೆ ಕೇಸರಿ ಹಾಕಿ ಕುಡಿದ್ರೆ ದುಪ್ಪಟ್ಟು ಲಾಭ ಪಡೆಯಬಹುದು.
ಹಾಲಿಗೆ ಒಂದು ಚಮಚ ಅಶ್ವಗಂಧದ ಪುಡಿಯನ್ನು ಹಾಕಿ ಸೇವನೆ ಮಾಡಿದ್ರೆ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ಸೋಂಪು ಸೇವನೆಯಿಂದ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಸೆಕ್ಸ್ ಜೀವನಕ್ಕೆ ಒಳ್ಳೆಯದು. ಹಾಲಿನ ಜೊತೆ ಸೋಂಪು ಸೇವನೆ ಮಾಡಿದ್ರೆ ಮತ್ತಷ್ಟು ಒಳ್ಳೆಯದು.