26 ವರ್ಷಗಳಿಂದ ಸೇವೆಯಲ್ಲಿದ್ದ ಜೆಎಸ್ 41 ನೋಂದಾಯಿತ ಜೆಡ್ಎಸ್ ಎನ್ಆರ್ಜೆ ಪ್ರೊಪೆಲ್ಲರ್ ವಿಮಾನಕ್ಕೆ ಪಕ್ಷಿಯು ಡಿಕ್ಕಿ ಹೊಡೆದ ಪರಿಣಾಮ ದೊಡ್ಡ ಮಟ್ಟದಲ್ಲಿ ಹಾನಿಯನ್ನು ಅನುಭವಿಸಿದೆ.
ಪಕ್ಷಿಯು ಬಡಿದ ಪರಿಣಾಮ ಪ್ರೊಪೆಲ್ಲರ್ನ ಬ್ಲೇಡ್ ಮುರಿದು ಕ್ಯಾಬಿನ್ನ ಒಳಗೆ ಪ್ರವೇಶಿಸಿದೆ. ಅದೃಷ್ಟವಶಾತ್ ಈ ಕ್ಯಾಬಿನ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.
ಬ್ಲೇಡ್ ಬೇರ್ಪಟ್ಟ ಪರಿಣಾಮವಾಗಿ ಕ್ಯಾಬಿನ್ನಾದ್ಯಂತ ಮರದ ಸ್ಲಿಂಟರ್ಗಳು ಕ್ಯಾಬಿನ್ನಾದ್ಯಂತ ಕಂಡುಬಂದಿದೆ. ಈ ನಿರ್ದಿಷ್ಟ ವಿಮಾನದಲ್ಲಿನ ಪ್ರೊಪೆಲ್ಲರ್ಗಳು ಕೇವಲ ಮರದಿಂದ ಮಾಡಲ್ಪಟ್ಟಿಲ್ಲ. ಜರ್ಮನಿ ಎಂಟಿ ಪ್ರೊಪೆಲ್ಲರ್ ಎಂದು ಕರೆಯಲ್ಪಡುವ ವಿಮಾನಗಳು 1928ರಿಂದ ನೈಸರ್ಗಿಕ ಸಂಯೋಜಿತ ಬ್ಲೇಡ್ಗಳನ್ನು ಉತ್ಪಾದನೆ ಮಾಡುತ್ತಿದೆ.
https://twitter.com/fabdjr/status/1478378075775774724