alex Certify ಹಾಡಹಗಲೇ ಮಹಿಳೆ ಮೇಲೆ ಮನಬಂದಂತೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಮಹಿಳೆ ಮೇಲೆ ಮನಬಂದಂತೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್

ದೆಹಲಿಯ ಮಂಗೋಲ್ಪುರಿಯಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಮಹಿಳೆ ಮತ್ತು ಆಕೆಯ ಮಗನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಅಷ್ಟೇ ಅಲ್ಲದೇ ಮಹಿಳೆಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಆಘಾತಕಾರಿ ದೃಶ್ಯವನ್ನೊಳಗೊಂಡ ಈ ಘಟನೆಯ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಪ್ರಕಾರ ಭಾನುವಾರ ಈ ಘಟನೆ ನಡೆದಿದೆ. ಗಲಾಟೆಗೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ, ಆದರೆ ವಿಡಿಯೋ ವೈರಲ್ ಆಗಿದೆ. ಹಗಲು ವೇಳೆ ಮಹಿಳೆಯೊಬ್ಬರು ವಸತಿ ಪ್ರದೇಶದಲ್ಲಿ ಮಗನೊಂದಿಗೆ ನಡೆದುಕೊಂಡು ಬರುತ್ತಿರುತ್ತಾರೆ.

ಈ ವೇಳೆ ಎದುರುಗಡೆಯಿಂದ ಬಂದ ವ್ಯಕ್ತಿಯೊಬ್ಬ ಮಹಿಳೆ ಸೇರಿದಂತೆ ಆಕೆಯ ಮಗನಿಗೆ ಕಪಾಳಮೋಕ್ಷ ಮಾಡುತ್ತಾನೆ. ಮಹಿಳೆಯನ್ನು ಸತತವಾಗಿ ನಿಂದಿಸುತ್ತಾ ಹೊಡೆಯುತ್ತಾನೆ.

ಪುರುಷ ಮತ್ತು ಮಹಿಳೆ ನಡುವಿನ ಜಗಳ ಜೋರಾಗ್ತಿದ್ದಂತೆ ಬಾಲಕ ಸ್ಥಳದಿಂದ ಓಡಿಹೋಗುತ್ತಾನೆ. ಬಳಿಕ ಆ ವ್ಯಕ್ತಿ ಕೋಲಿನಿಂದ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಾನೆ. ಏತನ್ಮಧ್ಯೆ ದಾರಿಯಲ್ಲಿ ಹೋಗ್ತಿದ್ದ ಕೆಲವರು ಮಹಿಳೆಯ ರಕ್ಷಣೆಗೆ ಮಂದಾಗಿ ವ್ಯಕ್ತಿಯನ್ನು ಎದುರಿಸುತ್ತಾರೆ. ಆದರೆ ಆತ ಮಹಿಳೆಯ ರಕ್ಷಣೆಗೆ ಬಂದವರ ಮೇಲೂ ಹಲ್ಲೆ ಮಾಡುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...