ದೆಹಲಿಯ ಮಂಗೋಲ್ಪುರಿಯಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಮಹಿಳೆ ಮತ್ತು ಆಕೆಯ ಮಗನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಅಷ್ಟೇ ಅಲ್ಲದೇ ಮಹಿಳೆಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಆಘಾತಕಾರಿ ದೃಶ್ಯವನ್ನೊಳಗೊಂಡ ಈ ಘಟನೆಯ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಪ್ರಕಾರ ಭಾನುವಾರ ಈ ಘಟನೆ ನಡೆದಿದೆ. ಗಲಾಟೆಗೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ, ಆದರೆ ವಿಡಿಯೋ ವೈರಲ್ ಆಗಿದೆ. ಹಗಲು ವೇಳೆ ಮಹಿಳೆಯೊಬ್ಬರು ವಸತಿ ಪ್ರದೇಶದಲ್ಲಿ ಮಗನೊಂದಿಗೆ ನಡೆದುಕೊಂಡು ಬರುತ್ತಿರುತ್ತಾರೆ.
ಈ ವೇಳೆ ಎದುರುಗಡೆಯಿಂದ ಬಂದ ವ್ಯಕ್ತಿಯೊಬ್ಬ ಮಹಿಳೆ ಸೇರಿದಂತೆ ಆಕೆಯ ಮಗನಿಗೆ ಕಪಾಳಮೋಕ್ಷ ಮಾಡುತ್ತಾನೆ. ಮಹಿಳೆಯನ್ನು ಸತತವಾಗಿ ನಿಂದಿಸುತ್ತಾ ಹೊಡೆಯುತ್ತಾನೆ.
ಪುರುಷ ಮತ್ತು ಮಹಿಳೆ ನಡುವಿನ ಜಗಳ ಜೋರಾಗ್ತಿದ್ದಂತೆ ಬಾಲಕ ಸ್ಥಳದಿಂದ ಓಡಿಹೋಗುತ್ತಾನೆ. ಬಳಿಕ ಆ ವ್ಯಕ್ತಿ ಕೋಲಿನಿಂದ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಾನೆ. ಏತನ್ಮಧ್ಯೆ ದಾರಿಯಲ್ಲಿ ಹೋಗ್ತಿದ್ದ ಕೆಲವರು ಮಹಿಳೆಯ ರಕ್ಷಣೆಗೆ ಮಂದಾಗಿ ವ್ಯಕ್ತಿಯನ್ನು ಎದುರಿಸುತ್ತಾರೆ. ಆದರೆ ಆತ ಮಹಿಳೆಯ ರಕ್ಷಣೆಗೆ ಬಂದವರ ಮೇಲೂ ಹಲ್ಲೆ ಮಾಡುತ್ತಾನೆ.
https://twitter.com/sirajnoorani/status/1681545416024915968?ref_src=twsrc%5Etfw%7Ctwcamp%5Etweetembed%7Ctwterm%5E1681545416024915968%7Ctwgr%5E64f8041c08b3b9eb072fc6e1d969f5cd6b5795f5%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fdelhicrimewomankidbeatenupinmangolpurichillingvideogoesviral-newsid-n519908712