alex Certify ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶವೇ ಹರಿಯಿತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶವೇ ಹರಿಯಿತು..!

ಲೈಂಗಿಕ ತೃಪ್ತಿ ಪಡೆಯಲು ಕೆಲವರು ಅಸಹಜ ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಾರೆ. ಇದರಿಂದ ಹಲವಾರು ಮದಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋ ನಿದರ್ಶನಗಳಿವೆ. ಇದೀಗ ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶ ಹರಿದಿರುವ ಆಘಾತಕಾರಿ ಘಟನೆ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದಿದೆ.

ಹಸ್ತಮೈಥುನ ಮಾಡುವಾಗ 20 ವರ್ಷದ ಯುವಕ ಅಪರೂಪದ ಶ್ವಾಸಕೋಶದ ಗಾಯಕ್ಕೆ ಒಳಗಾಗಿದ್ದಾನೆ. ಕೂಡಲೇ ಆತನನ್ನು ವಿಂಟರ್‌ತೂರ್‌ನ ಕ್ಯಾಂಟೋನಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಹಸ್ತಮೈಥುನ ಮಾಡುವಾಗ ಹಾಸಿಗೆಯಲ್ಲಿ ಮಲಗಿದ್ದ ಈತನಿಗೆ ಉಸಿರಾಟದ ತೊಂದರೆಯ ನಂತರ ಹಠಾತ್ ಆಗಿ ತೀಕ್ಷ್ಣವಾದ ಎದೆ ನೋವು ಕಾಣಿಸಿಕೊಂಡಿದೆ. ಯುವಕನನ್ನು ಪರೀಕ್ಷಿಸಿದ ವೈದ್ಯರು, ರೋಗಿಯ ಮುಖವು ಊದಿಕೊಂಡಿದೆ. ಆತ ಉಸಿರಾಡುವಾಗ ವಿಭಿನ್ನವಾದ ಬಿರುಕು ಶಬ್ಧ ಕೇಳಿಬರುತ್ತಿತ್ತು. ಅಲ್ಲದೆ, ಆತನ ಕೇಸ್ ಹಿಸ್ಟರಿಯಲ್ಲಿ ಯುವಕ ಸೌಮ್ಯವಾದ ಅಸ್ತಮಾದಿಂದ ಬಳಲುತ್ತಿರುವುದು ತಿಳಿದುಬಂದಿದೆ.

ರೋಗಿಯ ಎದೆಯ ಸ್ಕ್ಯಾನಿಂಗ್ ನ್ಯುಮೋಮೆಡಿಯಾಸ್ಟಿನಮ್ ಎಂಬ ಅಪರೂಪದ ಸ್ಥಿತಿಯನ್ನು ಬಹಿರಂಗಪಡಿಸಿದೆ. ಉಸಿರಾಟದ ವ್ಯವಸ್ಥೆಯ ಮೂಲಕ ಪರಿಚಲನೆಯಾಗುವ ಗಾಳಿಯು ಶ್ವಾಸಕೋಶಗಳ ನಡುವಿನ ಎದೆಯ ಜಾಗದಿಂದ ಹೊರಬಂದಾಗ, ವ್ಯಕ್ತಿಯ ಶ್ವಾಸಕೋಶದ ಚೀಲಗಳು ಸಹ ಹಾನಿಗೊಳಗಾದವು. ಇದರಿಂದ ಅವನಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅಗತ್ಯವಿತ್ತು.

ಶ್ವಾಸಕೋಶಗಳು ಅಥವಾ ಅನ್ನನಾಳಕ್ಕೆ ದೈಹಿಕ ಆಘಾತದಿಂದ ನ್ಯುಮೋಮೆಡಿಯಾಸ್ಟಿನಮ್ ಉಂಟಾಗಬಹುದು. ಇದು ಗಾಳಿಯನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ. ಈ ರೀತಿಯ ಗಾಯವು ಯುವಕರಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ವೈದ್ಯರು ಯುವಕನನ್ನು ವೀಕ್ಷಣೆಗಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಆತನ ಎದೆನೋವನ್ನು ಕಡಿಮೆ ಮಾಡಲು ಅವನಿಗೆ ಪ್ರತಿಜೀವಕಗಳನ್ನು ನೀಡಲಾಯಿತು. ಅದೃಷ್ಟವಶಾತ್ ಯುವಕ ಶೀಘ್ರದಲ್ಲೇ ಚೇತರಿಸಿಕೊಂಡಿದ್ದು, ಚಿಕಿತ್ಸೆ ಪಡೆದ ನಾಲ್ಕು ದಿನಗಳ ನಂತರ ಡಿಸ್ಚಾರ್ಜ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...