
ಸೌಂದರ್ಯ ಹೆಚ್ಚಿಸಿಕೊಳ್ಳಲು ಹಸಿ ಹಾಲನ್ನು ಬಳಸಬೇಕು ಎಂಬು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ?
ಹಸಿ ಹಾಲನ್ನು ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷದ ಬಳಿಕ ಮುಖ ತೊಳೆದುಕೊಂಡರೆ ನಿಮ್ಮ ತ್ವಚೆ ನಯವಾಗುತ್ತದೆ ಮತ್ತು ವಿಶೇಷ ಕಾಂತಿ ಪಡೆದುಕೊಳ್ಳುತ್ತದೆ.
ಮೊಡವೆ ಅಥವಾ ಸನ್ ಬರ್ನ್ ಕಾರಣದಿಂದ ಮುಖದಲ್ಲಿ ಮೊಡವೆಗಳಾಗಿದ್ದರೆ ಹಸಿ ಹಾಲು ಅದನ್ನು ನಿವಾರಿಸುತ್ತದೆ. ತ್ವಚೆಯ ಮೇಲ್ಭಾಗದಲ್ಲಿ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಇದನ್ನು ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ಬಳಿಕ ತಲೆ ತೊಳೆಯುವುದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. ಒರಟು ಹಾಗೂ ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.
ತ್ವಚೆಯಲ್ಲಿ ಕಾಣಿಸಿಕೊಳ್ಳುವ ತುರಿಕೆಯಂಥ ಸಮಸ್ಯೆಯನ್ನು ದೂರಮಾಡಿ ತ್ವಚೆಯ ರಂಧ್ರಗಳನ್ನು ನಿವಾರಿಸುತ್ತದೆ. ಹಸಿ ಹಾಲಿಗೆ ಜೇನುತುಪ್ಪ ಮತ್ತು ಪಪಾಯದ ಒಳಭಾಗ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಂಡರೆ ಅತ್ಯುತ್ತಮ ಫೇಸ್ ಮಾಸ್ಕ್ ಆಗಬಲ್ಲದು.