alex Certify ಹಸಿರು ಬಟಾಣಿಯ ಈ ಹೇರ್ ಪ್ಯಾಕ್ ಒಮ್ಮೆ ಬಳಸಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿರು ಬಟಾಣಿಯ ಈ ಹೇರ್ ಪ್ಯಾಕ್ ಒಮ್ಮೆ ಬಳಸಿ ನೋಡಿ

ಹಸಿರು ಬಟಾಣಿಗಳನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದನ್ನು ಕೂದಲಿನ ಸೌಂದರ್ಯ ವೃದ್ಧಿಸಲು ಬಳಸಬಹುದು. ಅದಕ್ಕಾಗಿ ಹಸಿರು ಬಟಾಣಿಯ ಈ ಹೇರ್ ಪ್ಯಾಕ್ ತಯಾರಿಸಿ ಬಳಸಿ.

1 ಕಪ್ ಹಸಿರು ಬಟಾಣಿಯನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ½ ಕಪ್ ಮೊಸರು ಮಿಕ್ಸ್ ಮಾಡಿ ಈ ಹೇರ್ ಪ್ಯಾಕ್ ನ್ನು ಕೂದಲಿಗೆ ಹಚ್ಚಿ ಕವರ್ ಮಾಡಿ 30 ನಿಮಿಷ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

1 ಕಪ್ ಹಸಿರು ಬಟಾಣಿಯನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿ ಅದಕ್ಕೆ 2 ಚಮಚ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಕವರ್ ಮಾಡಿ 30 ನಿಮಿಷ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಒಣ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...