alex Certify ಹಳೆ ವಾಹನಗಳ ನಿಷೇಧದ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಹರಿಯಾಣ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ವಾಹನಗಳ ನಿಷೇಧದ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಹರಿಯಾಣ ಸಿಎಂ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ತೀರ್ಪಿನ ಅನುಸಾರ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್​ ವಾಹನ ಹಾಗೂ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್​ ವಾಹನಗಳ ಓಡಾಟದ ಮೇಲಿನ ನಿಷೇಧವನ್ನು ಇದೇ ಬರುವ ಏಪ್ರಿಲ್​ 1 ರಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಹರಿಯಾಣ ಸಿಎಂ ಮನೋಹರ ಲಾಲ್​ ಖಟ್ಟರ್​​ ಹೇಳಿದ್ದಾರೆ.

ಆ ಆದೇಶದ ಪ್ರಕಾರ ಮೊದಲ ಹಂತದಲ್ಲಿ ಹಳೆಯದಾದ ಡೀಸೆಲ್​ ವಾಹನಗಳು ಹಾಗೂ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್​ ವಾಹನಗಳನ್ನು ಗುರಗಾಂವ್​ನಲ್ಲಿ ರಸ್ತೆಗಳಿಂದ ತೆಗೆದು ಹಾಕಲಾಗುತ್ತದೆ ಎಂದು ಹೇಳಿದರು. ಇನ್ನು ಆಟೋ ಚಾಲಕರಿಗೆ ತಮ್ಮ ಆಟೋಗಳನ್ನು ಬದಲಾಯಿಸಲು ಸಮಯ ನೀಡಲಾಗುವುದು ಎಂದು ಹೇಳಿದರು.

ಗುರುಗಾಂವ್​ನಲ್ಲಿ ಆಟೋ ಚಾಲಕರ ಸಂಘದ ಪ್ರತಿನಿಧಿಗಳ ಜೊತೆಯಲ್ಲಿ ಸಂವಾದ ನಡೆಸಿದ ಹರಿಯಾಣ ಸಿಎಂ ಮನೋಹರ ಲಾಲ್​ ಖಟ್ಟರ್​, ಮಾರ್ಚ್​ 10ರಂದು ಒಂದು ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಇಲ್ಲಿ ತಮ್ಮ ಹಳೆಯ ಆಟೋಗಳನ್ನು ನೀಡಿ ಹೊಸ ಇ ಆಟೋಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...