ಮೂರು ಎಸಳು ಪುದೀನಾ ಎಲೆ, ಉಪ್ಪು- ಚಿಟಿಕೆ, ಬೆಳ್ಳುಳ್ಳಿ ಎಸಳು-1 ಹಾಗೂ ಲವಂಗ-1. ಇಷ್ಟನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ. ಬಳಿಕ ಅದನ್ನು ಉಂಡೆ ರೀತಿ ಮಾಡಿ ನೋವಿರುವ ಜಾಗದಲ್ಲಿಡಿ.
ಸ್ವಲ್ಪ ಉರಿ ಉರಿ ಎಂದೆನಿಸಿ ಹಿಂಸೆಯಾಗಬಹುದು. ಆದರೆ, 5 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಬಳಿಕ 15 ನಿಮಿಷದವರೆಗೆ ನೀರನ್ನು ತಾಗಿಸಬೇಡಿ. ಶೀಘ್ರ ನೋವು ಕಡಿಮೆಯಾಗಿ, ನಿರಾಳವಾಗುತ್ತದೆ. ನೀವೊಮ್ಮೆ ಪ್ರಯತ್ನಿಸಿ, ಖಂಡಿತಾ ನಿಮ್ಮ ಹಲ್ಲು ನೋವಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ವಸಡು ನೋವಿನ ಸಮಸ್ಯೆಗಾಗಿ ಈ ಮನೆಮದ್ದು ಪ್ರಯತ್ನಿಸಿ
ಒಂದು ಬೆಳ್ಳುಳ್ಳಿ, ಚಿಟಿಕೆ ಉಪ್ಪು (ಕಲ್ಲುಪ್ಪು ಬೇಕಿದ್ದರೂ ಸೇರಿಸಬಹುದು) ಸೇರಿಸಿ ಚೆನ್ನಾಗಿ ಜಜ್ಜಿ. ಬಳಿಕ ಇದನ್ನು ನೋವಿರುವ ವಸಡಿಗೆ ಹಚ್ಚಿ 5 ನಿಮಿಷಗಳ ಕಾಲ ಹಾಗೆ ಬಿಡಿ. ಇದು ಕೂಡ ನಿಮಗೆ ಉರಿಯಾಗಿ ಕಿರಿಕಿರಿ ಎಂದೆನಿಸುತ್ತದೆ. ಆದರೆ, ಕೆಲವೇ ಹೊತ್ತಲ್ಲಿ ನೋವು ಶಮನವಾಗಿ ಶೀಘ್ರ ಪರಿಹಾರ ದೊರಕುತ್ತದೆ.