alex Certify ಹಲ್ಲುಜ್ಜುವಾಗ ಆಕಸ್ಮಿಕವಾಗಿ ಹೊಟ್ಟೆ ಒಳಗೋಯ್ತು ಟೂತ್ ಬ್ರಶ್….! ಮುಂದೇನಾಯ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲುಜ್ಜುವಾಗ ಆಕಸ್ಮಿಕವಾಗಿ ಹೊಟ್ಟೆ ಒಳಗೋಯ್ತು ಟೂತ್ ಬ್ರಶ್….! ಮುಂದೇನಾಯ್ತು ಗೊತ್ತಾ…?

ಸಾಮಾನ್ಯವಾಗಿ ಪುಟ್ಟ ಮಕ್ಕಳು ನಾಣ್ಯ ನುಂಗುವುದು, ಸಣ್ಣಪುಟ್ಟ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವುದನ್ನ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುವ ಬ್ರಶ್ ನುಂಗಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ರಾಜಸ್ಥಾನದ ಉದಯಪುರದ ಚಿತ್ತೋರ್ ನಲ್ಲಿ ವ್ಯಕ್ತಿಯೊಬ್ಬ ಹಲ್ಲುಜ್ಜುವಾಗ ಆಕಸ್ಮಿಕವಾಗಿ 12 ಸೆಂ.ಮೀ. ಉದ್ದದ ಟೂತ್ ಬ್ರಶ್ ನುಂಗಿದ್ದಾರೆ. ಇದು ವೈದ್ಯರಿಗೂ ಅಚ್ಚರಿ ಮೂಡಿಸಿದೆ. ಅದಗ್ಯೂ GBH ಅಮೇರಿಕನ್ ಆಸ್ಪತ್ರೆಯಲ್ಲಿ ವೈದ್ಯರು ಆಪರೇಷನ್ ಇಲ್ಲದೆ ಟೂತ್ ಬ್ರಶ್ ಅನ್ನು ಹೊರಗೆ ತೆಗೆದಿದ್ದಾರೆ. ಲಭ್ಯವಿರುವ ದಾಖಲೆಗಳ ಪ್ರಕಾರ ಟೂತ್ ಬ್ರಶ್ ನುಂಗಿರುವ ಇಂತಹ ಘಟನೆಗಳು ಜಗತ್ತಿನಲ್ಲಿ ಇದುವರೆಗೆ 50 ನಡೆದಿವೆ.

ಗಂಟಲು ಮತ್ತು ಬಾಯಿಯನ್ನು ಶುಚಿಗೊಳಿಸುವಾಗ ಆಕಸ್ಮಿಕವಾಗಿ ಬ್ರಶ್ ಮನುಷ್ಯನ ಗಂಟಲಿನೊಳಗೆ ಹೋಗಿದೆ. ಏನಾಯಿತೆಂದು ಅರಿತುಕೊಂಡು ಅದನ್ನು ಹೊರತೆಗೆಯುವ ಪ್ರಯತ್ನದಲ್ಲಿ ಬ್ರಶ್ ಆಳವಾಗಿ ಜಾರಿ ಹೊಟ್ಟೆಗೆ ಸೇರಿದೆ. ಅದನ್ನು ಹೊರತೆಗೆಯಲು ಎಲ್ಲಾ ರೀತಿಯ ಪ್ರಯತ್ನಗಳು ವಿಫಲವಾದಾಗ, ಸಂಬಂಧಿಕರು ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು.

ಆದರೆ ಅಲ್ಲಿ ಹಲ್ಲುಜ್ಜುವ ಬ್ರಷ್ ಅನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ನಂತರ ಸಂಬಂಧಿಕರು ಅವರನ್ನು ಉದಯಪುರದ ಜಿಬಿಎಚ್ ಅಮೆರಿಕನ್ ಆಸ್ಪತ್ರೆಗೆ ಕರೆದೊಯ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಟೂತ್ ಬ್ರಷ್ ಹೊಟ್ಟೆಯ ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದು ಪತ್ತೆಯಾಯಿತು. ಶಸ್ತ್ರಚಿಕಿತ್ಸಕ ಡಾ. ಶಶಾಂಕ್ ಜೆ ತ್ರಿವೇದಿ ಎಂಡೋಸ್ಕೋಪಿಕ್ ವಿಧಾನದಿಂದ ಅದನ್ನು ಹೊರ ತೆಗೆಯಲು ನಿರ್ಧರಿಸಿದರು.

ಬಳಿಕ ವ್ಯಕ್ತಿಯ ಬಾಯಿಯ ಮೂಲಕ 12 ಸೆಂ.ಮೀ. ಉದ್ದದ ಟೂತ್ ಬ್ರಷ್ ಅನ್ನು ಹೊರ ತೆಗೆದರು. ರೋಗಿಯನ್ನು ಒಂದು ದಿನ ಐಸಿಯುನಲ್ಲಿಟ್ಟ ನಂತರ ಡಿಸ್ಚಾರ್ಜ್ ಮಾಡಲಾಗಿದೆ.

ಡಾ. ಶಶಾಂಕ್ ಮಾತನಾಡಿ ಇದುವರೆಗೆ ಜಾಗತಿಕವಾಗಿ ಟೂತ್ ಬ್ರಶ್ ನುಂಗಿದ 50 ಪ್ರಕರಣಗಳು ವರದಿಯಾಗಿವೆ. ಈ ಮೊದಲು 2019 ರಲ್ಲಿ ದೆಹಲಿಯ ಏಮ್ಸ್ ನಲ್ಲಿ ವರದಿಯಾಗಿತ್ತು. ಪ್ರಸ್ತುತ ನಡೆದಿರುವ ಈ ಪ್ರಕರಣ ರಾಜಸ್ಥಾನದಲ್ಲಿ ಟೂತ್ ಬ್ರಶ್ ನುಂಗಿದ ಮೊದಲ ಪ್ರಕರಣವಾಗಿದೆ. ಈಗ ಈ ಪ್ರಕರಣವನ್ನು ಜನರಲ್ ಆಫ್ ಸರ್ಜರಿಯಲ್ಲಿ ಪ್ರಕಟಿಸಲು ಮತ್ತು WHO (ವಿಶ್ವ ಆರೋಗ್ಯ ಸಂಸ್ಥೆ) ದಾಖಲೆಗಳಲ್ಲಿ ನೋಂದಣಿಗಾಗಿ ಕಳುಹಿಸಲಾಗುತ್ತದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...