alex Certify ಹಲ್ದಿರಾಮ್ಸ್​ ತಿನಿಸುಗಳನ್ನು ಆನ್‌ ಲೈನ್‌ ನಲ್ಲಿ ಖರೀದಿಸಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ದಿರಾಮ್ಸ್​ ತಿನಿಸುಗಳನ್ನು ಆನ್‌ ಲೈನ್‌ ನಲ್ಲಿ ಖರೀದಿಸಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್

ಫೇಸ್​ಬುಕ್​ನಲ್ಲಿ ನೋಡಿದ ಜಾಹೀರಾತನ್ನು ನಂಬಿ ಹಲ್ದಿರಾಮ್ಸ್​ ತಿಂಡಿಯನ್ನು ಖರೀದಿಸಲು ಆರ್ಡರ್​ ಮಾಡಿದ ಮುಂಬೈ ವಿಲೆ​ ಪಾರ್ಲೆಯ 44 ವರ್ಷದ ಸಿವಿಲ್​ ಇಂಜಿನಿಯರ್​ ಸೈಬರ್ ವಂಚನೆಗೆ ಒಳಗಾಗಿದ್ದು, 18,666 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಸೈಬರ್​ ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ವಿಲೆ​ ಪಾರ್ಲೆ ಪೊಲೀಸ್​ ಠಾಣೆಯಲ್ಲಿ ಗುರುವಾರದಂದು ದೂರನ್ನು ದಾಖಲಿಸಿದ್ದಾರೆ.ಜನವರಿ 28 ಕಚೇರಿಯಲ್ಲಿ ಇದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಫೇಸ್​ಬುಕ್​ನಲ್ಲಿ ಹಲ್ದಿರಾಮ್ಸ್​​ನ ಸ್ವೀಟ್​ಗಳು ಹಾಗೂ ಸ್ನ್ಯಾಕ್​ಗಳ ಬಗ್ಗೆ ಜಾಹೀರಾತನ್ನು ನೋಡಿದ ಅವರು ಅಲ್ಲಿ ನೀಡಲಾದ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ದಾರೆ. ಇವರು ಸೈಬರ್ ವಂಚಕರು ಎಂಬುದು ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತನಾಡಿದ್ದಾರೆ.

ಸೈಬರ್​ ವಂಚಕರು ಎಸ್​ಎಂಎಸ್​ ಫಾರ್ವರ್ಡರ್​ ಎಂಬ ಆ್ಯಪ್​ ಡೌನ್​ಲೋಡ್​ ಮಾಡುವಂತೆ ಹೇಳಿದ್ದಾರೆ. ಅಲ್ಲದೇ ಇಲ್ಲಿ ಅವರ ಬ್ಯಾಂಕ್​ ವಿವರವನ್ನು ಪಡೆದುಕೊಂಡಿದ್ದಾರೆ. ಕೂಡಲೇ ಹಣ ಡೆಬಿಟ್​ ಆಗಿರುವುದು ಗಮನಕ್ಕೆ ಬಂದ ಬಳಿಕ ಕಾರ್ಡ್ ಬ್ಲಾಕ್ ಮಾಡಿದ ಅವರು ಪೊಲೀಸರನ್ನು ಭೇಟಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...