alex Certify ಹಲವರನ್ನು ಮದುವೆಯಾಗಿದ್ದ ಪೊಲೀಸ್ ಪೇದೆಗೆ ಬೆಳ್ಳಂಬೆಳಿಗ್ಗೆ ಗೂಸಾ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲವರನ್ನು ಮದುವೆಯಾಗಿದ್ದ ಪೊಲೀಸ್ ಪೇದೆಗೆ ಬೆಳ್ಳಂಬೆಳಿಗ್ಗೆ ಗೂಸಾ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಹಲವರನ್ನು ಮದುವೆಯಾಗಿ ವಂಚಿಸಿದ್ದ ಪೊಲೀಸ್ ಪೇದೆಗೆ ಆತನ ಎರಡನೇ ಪತ್ನಿ ಬೆಳ್ಳಂ ಬೆಳಿಗ್ಗೆಯೇ ಗೂಸಾ ನೀಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

GRP ಪೇದೆ ದುರ್ಗೇಶ್ ಸೋಂಕಾರ್ ಒದೆ ತಿಂದವನಾಗಿದ್ದು, ಅಲ್ಲಿನ ಸಾರ್ವಜನಿಕ ಉದ್ಯಾನವನದಲ್ಲಿ ಆತನ ದ್ವಿತೀಯ ಪತ್ನಿ ಶರ್ಟ್ ಹರಿದು ರಂಪಾಟ ಮಾಡಿದ್ದಾಳೆ. ಏಕಾಏಕಿ ನಡೆದ ಈ ಘಟನೆಯಿಂದ ಪಾರ್ಕಿಗೆ ವಾಕ್ ಬಂದಿದ್ದವರು ಶಾಕ್ ಆಗಿದ್ದಾರೆ.

ಈಗಾಗಲೇ ಮದುವೆಯಾಗಿದ್ದ ದುರ್ಗೇಶ್ ಈ ಮಹಿಳೆಯನ್ನು ಎರಡನೇ ವಿವಾಹವಾಗಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ದುರ್ಗೇಶನನ್ನು ಎರಡು ತಿಂಗಳ ಹಿಂದೆ ಕೆಲಸದಿಂದ ಅಮಾನತ್ತು ಮಾಡಲಾಗಿತ್ತು. ಇದರ ಮಧ್ಯೆಯೇ ಆತ ಮತ್ತೊಂದು ಮದುವೆಯಾಗಿದ್ದ ಎಂದು ಹೇಳಲಾಗಿದ್ದು, ಹೀಗಾಗಿ ದ್ವಿತೀಯ ಪತ್ನಿ ಪಾರ್ಕಿನಲ್ಲಿ ಗೂಸಾ ನೀಡಿದ್ದಾಳೆ.

— अर्जुन गुप्ता (@arjun9450517000) December 16, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...