
GRP ಪೇದೆ ದುರ್ಗೇಶ್ ಸೋಂಕಾರ್ ಒದೆ ತಿಂದವನಾಗಿದ್ದು, ಅಲ್ಲಿನ ಸಾರ್ವಜನಿಕ ಉದ್ಯಾನವನದಲ್ಲಿ ಆತನ ದ್ವಿತೀಯ ಪತ್ನಿ ಶರ್ಟ್ ಹರಿದು ರಂಪಾಟ ಮಾಡಿದ್ದಾಳೆ. ಏಕಾಏಕಿ ನಡೆದ ಈ ಘಟನೆಯಿಂದ ಪಾರ್ಕಿಗೆ ವಾಕ್ ಬಂದಿದ್ದವರು ಶಾಕ್ ಆಗಿದ್ದಾರೆ.
ಈಗಾಗಲೇ ಮದುವೆಯಾಗಿದ್ದ ದುರ್ಗೇಶ್ ಈ ಮಹಿಳೆಯನ್ನು ಎರಡನೇ ವಿವಾಹವಾಗಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ದುರ್ಗೇಶನನ್ನು ಎರಡು ತಿಂಗಳ ಹಿಂದೆ ಕೆಲಸದಿಂದ ಅಮಾನತ್ತು ಮಾಡಲಾಗಿತ್ತು. ಇದರ ಮಧ್ಯೆಯೇ ಆತ ಮತ್ತೊಂದು ಮದುವೆಯಾಗಿದ್ದ ಎಂದು ಹೇಳಲಾಗಿದ್ದು, ಹೀಗಾಗಿ ದ್ವಿತೀಯ ಪತ್ನಿ ಪಾರ್ಕಿನಲ್ಲಿ ಗೂಸಾ ನೀಡಿದ್ದಾಳೆ.