alex Certify ‘ಹರ್ ಘರ್ ತಿರಂಗಾ’ ಅಭಿಯಾನ; ವೆಬ್ ಸೈಟ್ ನಲ್ಲಿ 5 ಕೋಟಿಗೂ ಅಧಿಕ ಸೆಲ್ಫಿ ಅಪ್ಲೋಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹರ್ ಘರ್ ತಿರಂಗಾ’ ಅಭಿಯಾನ; ವೆಬ್ ಸೈಟ್ ನಲ್ಲಿ 5 ಕೋಟಿಗೂ ಅಧಿಕ ಸೆಲ್ಫಿ ಅಪ್ಲೋಡ್

75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 13 ರಿಂದ 15 ರ ವರೆಗೆ ಮೂರು ದಿನಗಳ ಕಾಲ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕರೆ ನೀಡಿದ್ದರು.

ಅಲ್ಲದೆ ಇದರ ಸೆಲ್ಫಿ ತೆಗೆದು ಅಭಿಯಾನದ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡುವಂತೆ ತಿಳಿಸಿದ್ದು, ಇದಕ್ಕೆ ದೇಶದಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ದೇಶವಾಸಿಗಳು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ.

ಸೋಮವಾರ ಸಂಜೆ 4:00 ವರೆಗೆ 5 ಕೋಟಿಗೂ ಅಧಿಕ ಮಂದಿ ತಿರಂಗಾದ ಜೊತೆ ತಮ್ಮ ಸೆಲ್ಫಿ ತೆಗೆದು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹರ್ ಘರ್ ತಿರಂಗಾ ಅಭಿಯಾನಕ್ಕೆ ಅದ್ಭುತ ಸ್ಪಂದನೆ ಸಿಕ್ಕಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...