ಕರೆನ್ಸಿ ನೋಟುಗಳನ್ನು ಎಷ್ಟೇ ಜತನವಾಗಿ ಇಟ್ಟುಕೊಂಡರೂ ಸಹ ಕೈಗಳು ಬದಲಾದಂತೆ ಅವುಗಳು ಕೊಳಕಾಗುವುದು ಅಥವಾ ಹರಿದು ಹೋಗುವುದು ಅಥವಾ ಹಾನಿಗೊಳಗಾಗುತ್ತವೆ. ಅಂತಹ ನೋಟುಗಳು ನಿಮ್ಮ ಬಳಿ ಇದ್ದರೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ Note refund rules 2009 (amended in 2018) ಅಡಿಯಲ್ಲಿ ನೋಟುಗಳನ್ನು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಬದಲಿಸಬಹುದಾಗಿದ್ದು, ಇದಕ್ಕೆ ಬ್ಯಾಂಕುಗಳು ನಿರಾಕರಿಸುವಂತಿಲ್ಲ.
ಒಂದೊಮ್ಮೆ ಇಂತಹ ನೋಟುಗಳನ್ನು ಬದಲಿಸಲು ಬ್ಯಾಂಕುಗಳು ನಿರಾಕರಿಸಿದರೆ ಅಂತಹ ಸಂದರ್ಭದಲ್ಲಿ ಬ್ಯಾಂಕ್ ವಿರುದ್ಧ ದೂರು ನೀಡಬಹುದಾಗಿದ್ದು, ದೂರು ನೀಡಿ ಒಂದು ತಿಂಗಳವರೆಗೆ ಇದು ಇತ್ಯರ್ಥವಾಗದಿದ್ದರೆ ಭಾರತೀಯ ರಿಸರ್ವ್ ಬ್ಯಾಂಕಿನ ಲೋಕಪಾಲ (Ombudsman) ರಿಗೆ ದೂರು ನೀಡಬಹುದಾಗಿದೆ.