ಹರಾಜಿಗಿದೆ ವಿಶ್ವದ ಮೊಟ್ಟ ಮೊದಲ ಎಸ್‌ಎಂಎಸ್ ಸಂದೇಶ…! ಬೆರಗಾಗಿಸುತ್ತೆ ಇದರ ಬೆಲೆ 20-12-2021 6:53AM IST / No Comments / Posted In: Latest News, Live News, International ವಾಟ್ಸಾಪ್ ಕಾಲಿಡುವ ಮುನ್ನ ಮೊಬೈಲ್ ನಲ್ಲಿ ಸಂದೇಶ ಕಳುಹಿಸುವ ಒಂದು ಯುಗವಿತ್ತು. ದಿನಕ್ಕೆ 100 ಎಸ್ಎಂಎಸ್ ಉಚಿತ ಎಂಬ ಆಫರ್ ಗಳೂ ಕೂಡ ಇದ್ದವು. ಬಳಿಕ ಪ್ರತಿ ಎಸ್ಎಂಎಸ್ ಗೆ ಇಂತಿಷ್ಟು ಹಣ ಕಟ್ಟಾಗುತ್ತಿತ್ತು. 160 ಅಥವಾ ಅದಕ್ಕಿಂತ ಕಡಿಮೆ ಅಕ್ಷರಗಳಲ್ಲಿ ನೀವು ಮಾಡಬಹುದಾದ, ಹೇಳಬಹುದಾದ ಎಲ್ಲವನ್ನೂ ಕೂಡ ಮೆಸೇಜ್ ಮಾಡಿ ಕಳುಹಿಸಬಹುದಿತ್ತು. ಅದೊಂದು ಸುಂದರ ದಿನಗಳಾಗಿವೆ. ಮೊದಲ ಬಾರಿಗೆ ಸಂದೇಶವನ್ನು 30 ವರ್ಷಗಳ ಹಿಂದೆ ಕಳುಹಿಸಲಾಗಿತ್ತು. 1992ರಲ್ಲಿ ಯುಕೆಯ ಉದ್ಯೋಗಿಯೊಬ್ಬರು ವೊಡಾಫೋನ್ ನೆಟ್‌ವರ್ಕ್‌ನಲ್ಲಿ ಈ ಸಂದೇಶವನ್ನು ಸ್ವೀಕರಿಸಿದ್ದರು. ಮೇರಿ ಕ್ರಿಸ್ಮಸ್ ಎಂಬ ಸಂದೇಶವನ್ನು ಕಳುಹಿಸಲಾಗಿತ್ತು. ಇದನ್ನು ಈಗ ನೆಟ್‌ವರ್ಕ್ ವೊಡಾಫೋನ್ ಸಂಸ್ಥೆ ಹರಾಜು ಹಾಕುತ್ತಿದೆ. ಈ ಎನ್ಎಫ್ಟಿ ಗಾಗಿ 200,000 ಡಾಲರ್ ಗಿಂತ ಹೆಚ್ಚು ಮೊತ್ತಕ್ಕೆ ಹರಾಜು ಆಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಬಂದ ಮೊತ್ತವನ್ನು ದಾನ ಮಾಡಲು ನಿರ್ಧರಿಸಲಾಗಿದೆ. ರಿಚರ್ಡ್ ಜಾರ್ವಿಸ್‌ಗೆ ಬರ್ಕ್‌ಷೈರ್‌ನ ನ್ಯೂಬರಿಯಲ್ಲಿರುವ ಇಂಜಿನಿಯರ್ ನೀಲ್ ಪ್ಯಾಪ್‌ವರ್ತ್ ಸಂದೇಶವನ್ನು ಕಳುಹಿಸಿದ್ದಾರೆ. ಪ್ಯಾಪ್‌ವರ್ತ್ ವೊಡಾಫೋನ್‌ಗಾಗಿ ಎಸ್ಎಂಎಸ್ ಸಂದೇಶ ಸೇವೆಯಲ್ಲಿ ಕೆಲಸ ಮಾಡುವ ಪರೀಕ್ಷಾ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಸಂದೇಶವನ್ನು ಡಿಸೆಂಬರ್ 3, 1992 ರಂದು ಆರ್ಬಿಟೆಲ್ 901 ಹ್ಯಾಂಡ್‌ಸೆಟ್‌ಗೆ ಯಶಸ್ವಿಯಾಗಿ ಕಳುಹಿಸಲಾಯಿತು. ಮೊದಲ ಸಂದೇಶವನ್ನು ಕಳುಹಿಸಿದ ನಂತರ, ಮೊಬೈಲ್ ಫೋನ್ ತಯಾರಕರು ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ವೈಶಿಷ್ಟ್ಯವನ್ನು ತರಲು ಪ್ರಾರಂಭಿಸಿದರು. ಈ ಸಾಲಿನಲ್ಲಿ ನೋಕಿಯಾ ಕಂಪನಿ ಮೊದಲ ಸ್ಥಾನದಲ್ಲಿದೆ. ವಿಶ್ವದ ಮೊದಲ ಎಸ್ಎಂಎಸ್ ಗಾಗಿ ಎನ್ಎಫ್ಟಿ ಹರಾಜನ್ನು ಪ್ಯಾರಿಸ್‌ನಲ್ಲಿ ಡಿಸೆಂಬರ್ 21, 2021 ರಂದು ನಡೆಸಲಾಗುವುದು. ಬಿಡ್‌ದಾರರು ತಮ್ಮ ಬಿಡ್‌ಗಳನ್ನು ಆನ್‌ಲೈನ್‌ನಲ್ಲಿ ಕೂಡ ಇರಿಸಬಹುದು. ವೊಡಾಫೋನ್ ಗ್ರೂಪ್ ಸಿಇ, ನಿಕ್ ರೀಡ್ ಸಹಿ ಮಾಡಿದ ಸಂದೇಶದ ದೃಢೀಕರಣವನ್ನು ಖಾತರಿಪಡಿಸುವ ಪ್ರಮಾಣಪತ್ರವನ್ನು ಖರೀದಿದಾರರಿಗೆ ನೀಡಲಾಗುತ್ತದೆ. ಇದಲ್ಲದೆ, ವೊಡಾಫೋನ್ ರಚಿಸಿದ ಮೂಲ ಸಂವಹನ ಪ್ರೋಟೋಕಾಲ್‌ನ ವಿವರವಾದ ಪ್ರತಿಕೃತಿ ಜೊತೆಗೆ ಎಸ್ಎಂಎಸ್ ಕಳುಹಿಸುವ/ಸ್ವೀಕರಿಸುವ ದಾಖಲೆಗಳು ಮತ್ತು ಮೂಲ ಸಂವಹನ ಪ್ರೋಟೋಕಾಲ್‌ನ ಪ್ರತಿಕೃತಿಯನ್ನು ಟಿಎಕ್ಸ್ ಟಿ ಫೈಲ್‌ಗಳಾಗಿ ಮತ್ತು ಪಿಡಿಎಫ್ ಫೈಲ್‌ಗಳಾಗಿ ಖರೀದಿದಾರರಿಗೆ ಕಂಪನಿಯಿಂದ ನೀಡಲಾಗುತ್ತದೆ. Did you know the world's #1stSMS was a simple "Merry Christmas"? Sent 30 years ago via the #Vodafone network, it's been transformed into a #NFT by @vodafone_de, so it can be auctioned to raise funds for our partners at #UNHCR, helping to build a better future for @refugees. pic.twitter.com/NDis7WEHxC — Vodafone Foundation (@VodafoneFdn) December 14, 2021