ದೀಪಾವಳಿ ಸಂಭ್ರಮ ಹತ್ತಿರ ಬರ್ತಾ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಖುಷಿಯಲ್ಲಿ ಮಿಂದೇಳುವ ಜನರಿಗೆ ಡಯೆಟ್ ಮೇಲೆ ಗಮನವಿರುವುದಿಲ್ಲ. ಸಿಕ್ಕಾಪಟ್ಟೆ ಸಿಹಿ ತಿಂದು ನಂತ್ರ ತೂಕ ಹೆಚ್ಚಾಯ್ತು, ಆರೋಗ್ಯ ಹಾಳಾಯ್ತು ಎಂದು ಗೊಣಗುವ ಬದಲು ಮೊದಲೇ ಡಯೆಟ್ ಪ್ಲಾನ್ ಮಾಡಿದ್ರೆ ಒಳ್ಳೆಯದು.
ಮನೆಯಲ್ಲಿ ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ, ನೀರಿನ ಬಕೆಟ್ ಗೆ ಬಿದ್ದು ಮಗು ಸಾವು
ಈ ಸಮಯದಲ್ಲಿ ಹವಾಮಾನ ಬದಲಾಗುತ್ತದೆ. ಚಳಿಗಾಲ ಪ್ರಾರಂಭವಾಗುತ್ತದೆ. ಆದ್ದರಿಂದ ಆಹಾರ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತಣ್ಣೀರಿನ ಸೇವನೆಯನ್ನು ನಿಲ್ಲಿಸಬೇಕು. ಐಸ್ ಕ್ರೀಮ್-ಕೋಲಾದಂತಹ ಉತ್ಪನ್ನಗಳನ್ನು ಸಹ ಸೇವಿಸಬಾರದು. ಶೀತಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಬೇಕು. ಹಬ್ಬದ ಸಂಭ್ರಮದಲ್ಲಿ ಆರೋಗ್ಯ ಮರೆಯಬಾರದು.
ರಾತ್ರಿ ಎಣ್ಣೆಯಲ್ಲಿ ಕರಿದ ಆಹಾರ ಸೇವಿಸಲು ಬಯಸಿದ್ದರೆ ಹಗಲಿನಲ್ಲಿ ಲಘು ಆಹಾರವನ್ನು ಸೇವಿಸಿ. ಹಗಲಿನಲ್ಲಿ ಹೆಚ್ಚು ಆಹಾರವನ್ನು ಸೇವಿಸಲು ಬಯಸಿದರೆ, ರಾತ್ರಿ ಲಘು ಆಹಾರ ಸೇವಿಸಿ. ದಿನದಲ್ಲಿ ಒಂದು ಸಮಯ ಮಾತ್ರ ಅತಿಯಾಗಿ ಸೇವನೆ ಮಾಡಿ. ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ.
ಟೀಂ ಇಂಡಿಯಾದ ಈ ಆಟಗಾರನಿಗೆ ಕೊನೆಯಾಗಲಿದೆ ಟಿ-20 ವಿಶ್ವಕಪ್…..?
ಹಬ್ಬದ ಕೆಲಸ, ಸಂಭ್ರಮ, ಓಡಾಟದಲ್ಲಿ ಅನೇಕರು ನೀರು ಸೇವನೆ ಮರೆತುಬಿಡ್ತಾರೆ. ಜೊತೆಗೆ ಋತುವಿನ ಹಣ್ಣು ಸೇವನೆ ಮಾಡುವುದಿಲ್ಲ. ಅಕ್ಟೋಬರ್ –ನವೆಂಬರ್ ತಿಂಗಳಿನಲ್ಲಿ ಅನೇಕ ರೀತಿಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಈ ಹಣ್ಣುಗಳು ನಿಮ್ಮ ಡಯೆಟ್ ನಲ್ಲಿರಲಿ. ಈ ಋತುವಿನಲ್ಲಿ ಬಾಯಾರಿಕೆ ಕಡಿಮೆ. ಆದ್ರೆ ದೇಹಕ್ಕೆ ತುಂಬಾ ನೀರು ಬೇಕಾಗುತ್ತದೆ. ಹಾಗಾಗಿ ಆಗಾಗ ನೀರು ಕುಡಿಯುತ್ತಿರಿ.
ಹಬ್ಬ ಇದ್ದರೆ ಮನೆಯಲ್ಲಿ ಸಿಹಿ ತಿಂಡಿಗಳು ಇರುತ್ವೆ. ಮನೆಯಲ್ಲಿದೆ ಎಂಬ ಕಾರಣಕ್ಕೆ ಸಿಹಿ ಸೇವನೆ ಸೂಕ್ತವಲ್ಲ. ಸಿಹಿ ತಿಂಡಿ ದೇಹದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ, ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಸಿಹಿ ತಿಂಡಿಗಳನ್ನು ಮಿತಿಯಲ್ಲಿ ಸೇವಿಸಬೇಕು. ದಿನದಲ್ಲಿ 2 ಕ್ಕಿಂತ ಹೆಚ್ಚು ಸಿಹಿ ತಿಂಡಿಗಳನ್ನು ಸೇವಿಸದಿದ್ದರೆ ಉತ್ತಮ.
ಹಬ್ಬದ ಸಮಯದಲ್ಲಿ ವರ್ಕ್ ಔಟ್ ಮರೆಯಬೇಡಿ. ಮನೆಯಲ್ಲಿ ಅತಿಥಿಗಳಿರುತ್ತಾರೆ. ಅಥವಾ ನೀವೇ ಅತಿಥಿಗಳ ಮನೆಗೆ ಹೋಗಿರುತ್ತೀರಿ. ಆಗ್ಲೂ ವರ್ಕ್ ಔಟ್ ಇರಲಿ. ಹಬ್ಬದ ಸಮಯದಲ್ಲಿ ಆಹಾರದಲ್ಲಿ ಏರುಪೇರಾಗುವ ಕಾರಣ ವರ್ಕ್ಔಟ್ ಅವಶ್ಯಕವಾಗುತ್ತದೆ.