
1. ಗೋವಾ : ಸಾಮಾನ್ಯವಾಗಿ ಸಮುದ್ರ ಪ್ರಿಯರ ಆದ್ಯತೆಯ ಪಟ್ಟಿಯಲ್ಲಿ ಗೋವಾ ಮೊದಲ ಸ್ಥಾನದಲ್ಲಿರುತ್ತದೆ. ಅದರಲ್ಲೂ ನವ ಜೋಡಿಗಳಿಗೆ ಗೋವಾ ಬೀಚ್ ಹೆಚ್ಚು ಆಪ್ತ. ಒಬ್ಬರನ್ನೊಬ್ಬರು ಪರಸ್ಪರ ಅರಿತುಕೊಳ್ಳಲು ಇಲ್ಲಿನ ವಾತಾವರಣ ನೆರವಿಗೆ ಬರುತ್ತದೆ. ಮದುವೆಯ ಒತ್ತಡ, ಬಂಧು ಬಾಂಧವರ ಮನೆಯ ವಿಸಿಟ್ಸ್ ಇದೆಲ್ಲದರ ನಂತರ ನಿರಾಳವಾಗಿ ಇಲ್ಲಿ ಟೈಂ ಸ್ಪೆಂಡ್ ಮಾಡಬಹುದು.
2. ಮನಾಲಿ : ಗಿರಿಧಾಮಗಳಲ್ಲಿ ತಂಪಾದ ವಾತಾವರಣದ ನಡುವೆ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಮನಾಲಿಗಿಂತ ಬೆಸ್ಟ್ ಪ್ಲೇಸ್ ಇನ್ನೊಂದಿಲ್ಲ. ಹಿಮಾಚಲ ಪ್ರದೇಶದಲ್ಲಿರುವ ಮನಾಲಿಗೆ ಭಾರತ ಸೇರಿದಂತೆ ಸಾಕಷ್ಟು ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಾರೆ. ಹೋಂ ಸ್ಟೇ, ಕೆಫೆ ಸೆಂಟರ್, ರೆಸ್ಟೊರೆಂಟ್ಗಳು ನಿಮಗೆ ಹೊಸ ಅನುಭವ ನೀಡುತ್ತವೆ.
BIG BREAKING: PSI ಹುದ್ದೆ ನೇಮಕಾತಿ ಅಕ್ರಮ; ಮತ್ತೋರ್ವ ಪೊಲೀಸ್ ಪೇದೆ ಅರೆಸ್ಟ್
3. ಕೇರಳ : ಕೇರಳದ ಪ್ರಶಾಂತ ವಾತಾವರಣ. ಅಲ್ಲಿಯ ಬೋಟ್ ಹೌಸ್ಗಳು ದಂಪತಿಗಳ ಖುಷಿಯ ಕ್ಷಣಗಳನ್ನು ಇಮ್ಮಡಿಗೊಳಿಸುತ್ತವೆ. ಕೇರಳದ ವಿಭಿನ್ನ ಆಹಾರ ಪದ್ಧತಿ, ಕಣ್ಣರಳಿಸುವ ಪ್ರಕೃತಿ ಸೌಂದರ್ಯ, ತಂಪಾದ ಗಾಳಿ ಇದೆಲ್ಲವೂ ಮನಸ್ಸಿಗೆ ನೆಮ್ಮದಿ ತರುವುದು ಗ್ಯಾರಂಟಿ.

4 : ಅಜಂತಾ ಎಲ್ಲೋರಾ : ವಿಶ್ವಪರಂಪರೆಯ ತಾಣಗಳ ಈ ಸ್ಥಳ ದಂಪತಿಗಳ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಇಲ್ಲಿನ ಕೆತ್ತನೆಗಳು ನಿಮ್ಮನ್ನು ಬೆರಗುಗೊಳಿಸುತ್ತವೆ. ಪ್ರವಾಸ ಪ್ರಿಯ ದಂಪತಿಗಳು ನೀವಾಗಿದ್ರೆ ಈ ಸ್ಥಳ ನಿಮಗೆ ವಿಶೇಷ ಒಳನೋಟಗಳನ್ನು ನೀಡುತ್ತದೆ.

5 : ಕೊಡಗು : ಕೊಡಗು ಹೋಂ ಸ್ಟೇ ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಇಲ್ಲಿನ ಕಾಫಿ ಹೀರುತ್ತಾ, ಪ್ರಕೃತಿಯ ಸಿರಿಯನ್ನು ಕಣ್ತುಂಬಿಕೊಳ್ಳುತ್ತಾ ಪ್ರತಿ ಕ್ಷಣವನ್ನು ನೆಮ್ಮದಿಯಿಂದ ಕಳೆಯಬಹುದು. ಅಲ್ಲದೇ ನಿಮಗೆ ಬಜೆಟ್ ಫ್ರೆಂಡ್ಲಿ ಕೂಡ ಹೌದು.
