alex Certify ಹತ್ತಿಯಂತೆ ಮೃದುವಾದ ಮೆಂತ್ಯ ದೋಸೆ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ತಿಯಂತೆ ಮೃದುವಾದ ಮೆಂತ್ಯ ದೋಸೆ ಮಾಡಿ ಸವಿಯಿರಿ

ಮೆಂತ್ಯ ದೋಸೆ 4K ಕನ್ನಡ ರೆಸಿಪಿ Menthya Dose | Fenugreek Seeds Dosa | Kannada Recipe Yuvik - YouTube

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 4 ಕಪ್, ಅವಲಕ್ಕಿ- 1 ಕಪ್, ಕಾಯಿತುರಿ- 1 ಕಪ್, ಬೆಲ್ಲ- ಅರ್ಧ ಕಪ್, ಮೊಸರು- ಅರ್ಧ ಕಪ್, ಮೆಂತ್ಯ ಕಾಳು- ಒಂದು ಮುಕ್ಕಾಲು ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.

ಚಹಾ ಜೊತೆ ಈರುಳ್ಳಿ ವಡೆ ಸವಿಯಿರಿ

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 5 ರಿಂದ 6 ಗಂಟೆ ಕಾಲ ನೆನೆಸಿಡಿ. ಅವಲಕ್ಕಿಯನ್ನೂ ಕೂಡ ನೆನೆಸಿಡಬೇಕು. ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಜೊತೆಗೆ ಮೊಸರು, ಬೆಲ್ಲ, ಅವಲಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಿ.

ನಂತರ ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಹುಳಿ ಬರಲು ಇಡಬೇಕು. 8 ರಿಂದ 10 ಗಂಟೆ ಕಾಲ ಮುಚ್ಚಿಟ್ಟು ಹಾಗೆ ಇಡಿ. ಮಾಮೂಲಿ ದೋಸೆ ಹಿಟ್ಟಿನ ಹದವಿರಲಿ. ನಂತರ ಸ್ಟೌ ನಲ್ಲಿ ದೋಸೆ ಕಾವಲಿ ಇಟ್ಟು, ಹದ ಬಿಸಿಯಾದಾಗ ದಪ್ಪವಾಗಿ ದೋಸೆ ಹುಯ್ಯಿರಿ. ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಸವಿಯಲು ರುಚಿಯಾದ ಮೆಂತ್ಯ ದೋಸೆ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...