alex Certify ಹಣ್ಣು ತರಕಾರಿ ತಿನ್ನದ ಮಕ್ಕಳಿಗೆ ಈ ಐಡಿಯಾ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣು ತರಕಾರಿ ತಿನ್ನದ ಮಕ್ಕಳಿಗೆ ಈ ಐಡಿಯಾ ಮಾಡಿ

ಮಕ್ಕಳ ಬೆಳವಣಿಗೆಗೆ ಸಾಕಷ್ಟು ಹಣ್ಣು, ತರಕಾರಿ ಸೇವನೆ ಬಹಳ ಅಗತ್ಯ ಇರುತ್ತದೆ. ಆದರೆ ಈಗ ಮಕ್ಕಳು ಹೆಚ್ಚು ತರಕಾರಿ, ಹಣ್ಣು ತಿನ್ನಲು ಇಷ್ಟ ಪಡುವುದಿಲ್ಲ. ಹೇಗಾದ್ರೂ ಮಾಡಿ ಮಕ್ಕಳು ಇದನ್ನೆಲ್ಲಾ ತಿನ್ನಬೇಕು ಎಂದು ಎಷ್ಟೋ ತಾಯಂದಿರು ತರಕಾರಿಯನ್ನು ಮ್ಯಾಶ್ ಮಾಡಿಯೋ, ರುಬ್ಬಿ ದೋಸೆ ಮಾಡುವುದರ ಮೂಲಕವೂ ತಿನ್ನಿಸಲು ಪ್ರಯತ್ನ ಪಡುತ್ತಾರೆ.

ತೀರಾ ಪುಟ್ಟ ಮಕ್ಕಳಿಗೆ ಹಣ್ಣು ತರಕಾರಿಗಳನ್ನು ಅಲಂಕಾರಿಕವಾಗಿ ಕತ್ತರಿಸಿ, ವಿನ್ಯಾಸಗೊಳಿಸಿ ತಟ್ಟೆಯಲ್ಲಿ ಕೊಡಿ. ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ. ಈಗಷ್ಟೇ ಶಾಲೆಗೆ ಹೋಗಲು ಪ್ರಾರಂಭ ಮಾಡಿದ ಮಕ್ಕಳಿಗೆ ಹಣ್ಣು, ತರಕಾರಿಗಳಲ್ಲಿ ಇಂಗ್ಲಿಷ್ ಅಥವಾ ಕನ್ನಡ ಅಕ್ಷರಗಳ ಆಕಾರಕ್ಕೆ ಕತ್ತರಿಸಿ ಅವರ ಹೆಸರನ್ನು ಅದರಲ್ಲಿ ಮೂಡಿಸಿ ಕೊಡಿ. ಜೊತೆಗೆ 1,2,3 ಅಂಕಿಗಳನ್ನು ತರಕಾರಿಯಲ್ಲಿ ಕೆತ್ತಿ ತಿನ್ನಲು ಕೊಡಬಹುದು.

ಅಪ್ಪಾ, ಅಮ್ಮಂದಿರಿಗೆ ಸ್ವಲ್ಪ ಕ್ರಿಯೇಟಿವ್ ಆಗಿ, ಕಲಾತ್ಮಕವಾಗಿ ಯೋಚಿಸುವ ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ಹೊಂದಿಸಿಕೊಳ್ಳುವ ಅಗತ್ಯ ಇದೆ. ಮಕ್ಕಳ ಜೊತೆ ಪೋಷಕರು ತರಕಾರಿ ಹಣ್ಣು ತಿನ್ನುವ ಅಭ್ಯಾಸ ಬೆಳೆಸಿಕೊಂಡರೆ ಮಕ್ಕಳು ನಮ್ಮನ್ನು ನೋಡಿ ಅನುಕರಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...