alex Certify ಹಣವಂತರಾಗಬೇಕೆಂದು ಬಯಸಿದರೆ ನವರಾತ್ರಿಯಲ್ಲಿ ಮಾಡಿ ಈ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣವಂತರಾಗಬೇಕೆಂದು ಬಯಸಿದರೆ ನವರಾತ್ರಿಯಲ್ಲಿ ಮಾಡಿ ಈ  ಕೆಲಸ…!

ತಾಯಿ ದುರ್ಗೆಯ ಕೃಪೆಯಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಸಿಗುತ್ತದೆ. ಕೆಲಸದಲ್ಲಿ ಯಶಸ್ಸು ಪಡೆಯಬಹುದು. ವ್ಯಕ್ತಿಯ ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಆದ್ದರಿಂದ ನವರಾತ್ರಿಯಲ್ಲಿ ಜನರು ದುರ್ಗಾದೇವಿಯನ್ನು ಆರಾಧಿಸುತ್ತಾರೆ.

ಈ ವರ್ಷ ನವರಾತ್ರಿಯು ಅಕ್ಟೋಬರ್ 15 ರಿಂದ ಪ್ರಾರಂಭವಾಗಲಿದೆ. ಶ್ರೀಮಂತರಾಗಲು ಬಯಸುವವರು ನವರಾತ್ರಿಯ ಈ 9 ದಿನಗಳಲ್ಲಿ ಕೆಲವು ವಿಶೇಷ ಕ್ರಮಗಳನ್ನು ಅನುಸರಿಸಬೇಕು.

– ನವರಾತ್ರಿಯ ಸಮಯದಲ್ಲಿ ಆಂಜನೇಯನನ್ನು ಆರಾಧಿಸಬೇಕು. ನವರಾತ್ರಿಯ 9 ದಿನಗಳೂ ಹನುಮಂತನಿಗೆ ವೀಳ್ಯದೆಲೆಯನ್ನು ಅರ್ಪಿಸಿ.

– ನವರಾತ್ರಿಯ 9 ದಿನ ಅಖಂಡ ದೀಪವನ್ನು ಬೆಳಗಿಸುವುದು ಬಹಳ ಮುಖ್ಯ. ಬೆಳಗ್ಗೆ ಮತ್ತು ಸಂಜೆ ತುಪ್ಪ ಅಥವಾ ಎಣ್ಣೆಯ ದೀಪವನ್ನು ಬೆಳಗಿಸಲು ಮರೆಯಬೇಡಿ. ಹಾಗೆಯೇ 4 ಲವಂಗವನ್ನು ದೀಪದಲ್ಲಿ ಹಾಕಿ. ದೀಪ ಮತ್ತು ಲವಂಗದ ಈ ಉಪಾಯವು ಭಕ್ತರನ್ನು  ಶ್ರೀಮಂತರನ್ನಾಗಿ ಮಾಡುತ್ತದೆ.

– ದುರ್ಗೆಗೆ ಕೆಂಪು ಬಣ್ಣದ ಬಟ್ಟೆಯಲ್ಲಿ 5 ವಿಧದ ಡ್ರೈ ಫ್ರೂಟ್‌ಗಳನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ದುರ್ಗೆ ಸಂತುಷ್ಟಳಾಗುತ್ತಾಳೆ.

– ನವರಾತ್ರಿಯ ಯಾವುದೇ ದಿನ ದೇವಿ ದೇವಸ್ಥಾನದಲ್ಲಿ ಕೆಂಪು ಧ್ವಜವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ.

– ತಾಜಾ ವೀಳ್ಯದೆಲೆಗಳ ಮೇಲೆ ನಾಣ್ಯಗಳನ್ನು ಇರಿಸಿ ಅದನ್ನು ದೇವಿಗೆ ಅರ್ಪಿಸಿ. ಜೊತೆಗೆ 7 ಏಲಕ್ಕಿ ಮತ್ತು ಸಕ್ಕರೆ ಮಿಠಾಯಿಗಳನ್ನು ಕೂಡ ಅರ್ಪಿಸುವುದು ಮಂಗಳಕರ.

– ನವರಾತ್ರಿಯ ಸಮಯದಲ್ಲಿ ದೇವಿಗೆ ಮಖಾನ ಮತ್ತು ನಾಣ್ಯಗಳನ್ನು ಅರ್ಪಿಸಬೇಕು. ನಂತರ ಅವುಗಳನ್ನು ಬಡವರಿಗೆ ವಿತರಿಸಿ.

– ನವರಾತ್ರಿಯಲ್ಲಿ ದುರ್ಗೆಯರನ್ನು ಮನೆಗೆ ಕರೆದು ಪಾಯಸ ಮತ್ತು ಪೂರಿ ಉಣಬಡಿಸಿ. ಏನನ್ನಾದರೂ ಉಡುಗೊರೆಯಾಗಿ ನೀಡಿ.

– ನವರಾತ್ರಿಯ ಸಮಯದಲ್ಲಿ ಮನೆಯಲ್ಲಿ ಸ್ವಸ್ತಿಕ, ಓಂ, ಶ್ರೀ, ಆನೆ, ಕಲಶ, ದೀಪ, ಗರುಡ ಗಂಟೆ, ಪಾತ್ರೆ, ಕಮಲ, ಶ್ರೀಯಂತ್ರ, ಆಚಮಣಿ, ಕಿರೀಟ ಅಥವಾ ತ್ರಿಶೂಲದಂತಹ ಯಾವುದೇ ಮಂಗಳಕರವಾದ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಿ. ನಂತರ ಅದನ್ನು ದುರ್ಗಾ ದೇವಿಯ ಪಾದದಲ್ಲಿ ಇಟ್ಟು 9 ದಿನಗಳ ಕಾಲ ಪೂಜಿಸಿ. ಕೊನೆಯ ದಿನದಂದು ಆ ವಸ್ತುವನ್ನು ಗುಲಾಬಿ ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ಅದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಸಂಪತ್ತು ವೇಗವಾಗಿ ಹೆಚ್ಚುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...