alex Certify ಹಣ ಗಳಿಕೆಯಲ್ಲಿ ಮತ್ತೊಂದು ದಾಖಲೆ ಮಾಡುತ್ತಿರುವ ಕಾಂತಾರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಗಳಿಕೆಯಲ್ಲಿ ಮತ್ತೊಂದು ದಾಖಲೆ ಮಾಡುತ್ತಿರುವ ಕಾಂತಾರಾ

ಇಡೀ ಭಾರತ ಚಿತ್ರರಂಗವೇ ತಿರುಗಿನೋಡುವಂತೆ ಮಾಡಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಗಲ್ಲಾಪಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರತಿದಿನ ಹೊಸ ದಾಖಲೆ ಮಾಡುತ್ತಿರುವ ಕಾಂತಾರಾ ಇದೀಗ ಹಣಗಳಿಗೆಯಲ್ಲಿ ಮತ್ತೊಂದು ರೆಕಾರ್ಡ್ ಗೆ ಮುಂದಾಗಿದೆ. ಇದುವರೆಗೆ 360 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿರುವ ಕಾಂತಾರಾ ಚಿತ್ರವು ಶೀಘ್ರದಲ್ಲೇ 400 ಕೋಟಿ ರೂ. ಗಳಿಸುವ ಚಿತ್ರಗಳ ಸಾಲಿಗೆ ಸೇರಲಿದೆ.

ಚಿತ್ರ ಬಿಡುಗಡೆಯಾಗಿ ತಿಂಗಳೂ ಕಳಿದಿದ್ದರೂ ಕಾಂತಾರಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕೆಲ ದಿನಗಳಲ್ಲೇ 400 ಕೋಟಿ ಕಲೆಕ್ಷನ್ ಮಾಡಿದೆ.

40 ದಿನಗಳಲ್ಲಿ 350 ಕೋಟಿಗಳ ಮಾನದಂಡವನ್ನು ಮೀರಿರುವ ಕಾಂತಾರಾ ಜಾಗತಿಕವಾಗಿ 400 ಕೋಟಿ ರೂ. ಗಳಿಕೆ ಮಾಡಲಿದೆ. ಕಾಂತಾರ ಭಾರತದಲ್ಲಿ 275 ಕೋಟಿ ರೂ.ಗಳಿಸಿ ಓಡುತ್ತಿದೆ . ಅದರಲ್ಲಿ ಸುಮಾರು 173 ಕೋಟಿ ರೂ. ಕರ್ನಾಟಕವೊಂದರಿಂದಲೇ ಕಲೆಕ್ಷನ್ ಆಗಿದೆ. ಈ ಚಿತ್ರವು ಪ್ರಸ್ತುತ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

ಇದು ಶೀಘ್ರದಲ್ಲೇ ಕೆಜಿಎಫ್ ಚಿತ್ರವನ್ನು ಮೀರಿಸಬಹುದು. ಯಶ್ ಅಭಿನಯದ ಕೆಜಿಎಫ್ ಚಿತ್ರ ಕರ್ನಾಟಕದಲ್ಲಿ ಒಟ್ಟು 182 ಕೋಟಿ ರೂಪಾಯಿ ವ್ಯವಹಾರ ಮಾಡಿದೆ.

ದಿಯಲ್ಲಿ ಕಾಂತಾರಾ ಚಿತ್ರ ಶೀಘ್ರದಲ್ಲೇ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗಳಿಸಲಿದೆ. ಮುಂದಿನ ವಾರ ಅಜಯ್ ದೇವಗನ್ ಅವರ ದೃಶ್ಯಂ 2 ತೆರೆಗೆ ಬರುವ ಮೊದಲು ಮತ್ತು ವರುಣ್ ಧವನ್ ಅವರ ಭೇದಿಯಾ ನವೆಂಬರ್ 25 ರಂದು ಬಿಡುಗಡೆಯಾಗುವ ಮೊದಲು ಇದು 100 ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...