alex Certify ಸ್ವಾಮೀಜಿಯಿಂದ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ನಿರಾಕರಿಸಿದ ವಿದ್ಯಾರ್ಥಿಗಳು..! ಇದರ ಹಿಂದಿತ್ತು ಒಂದು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾಮೀಜಿಯಿಂದ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ನಿರಾಕರಿಸಿದ ವಿದ್ಯಾರ್ಥಿಗಳು..! ಇದರ ಹಿಂದಿತ್ತು ಒಂದು ಕಾರಣ

ಸ್ವಾಮೀಜಿಯನ್ನು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿದ್ದಕ್ಕೆ ಬೇಸರಗೊಂಡ ಕೊಲಂಬೊ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು ಪದವಿ ಪ್ರಧಾನ ಸಮಾರಂಭದಲ್ಲಿ ಸ್ವಾಮೀಜಿ ಮುರುತ್ತೆಟ್ಟುವೆ ಆನಂದ ಥೇರೋರಿಂದ ಪದವಿ ಪ್ರಮಾಣ ಪತ್ರವನ್ನ ಸ್ವೀಕರಿಸದೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಮತ್ತು ಫೈನಾನ್ಸ್ ಟೀಚರ್ಸ್ ಅಸೋಸಿಯೇಷನ್ ​​(ಎಫ್‌ಎಂಎಫ್‌ಟಿಎ) ಕೊಲಂಬೊ ವಿಶ್ವವಿದ್ಯಾಲಯದ ಪದವಿ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತ್ತು.

ಕೊಲಂಬೋ ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ಪೂಜ್ಯ ಮುರುತ್ತೆಟ್ಟುವೆ ಆನಂದ ಥೇರೋರನ್ನು ನೇಮಕ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆಯ ಸಂಕೇತವಾಗಿ ಮೂರು ದಿನಗಳ ಕಾಲ ನಡೆದ ಸಮಾರಂಭದಲ್ಲಿ ಭಾಗವಹಿಸದೇ ಎಫ್​ಎಂಎಫ್​ಟಿಎ ಆಕ್ರೋಶ ಹೊರಹಾಕಿದೆ.

ಮುರುತ್ತೆಟ್ಟುವೆ ಆನಂದ ಥೇರೋರನ್ನು ಕುಲಪತಿಯನ್ನಾಗಿ ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುವ ಸಲುವಾಗಿ ಕುಲಪತಿಗಳು ಡಿಸೆಂಬರ್​ 17ರಿಂದ 19ರವರೆಗೆ ಭಾಗಿಯಾಗಿದ್ದ ಔಪಚಾರಿಕ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸದೇ ಇರಲು ಎಫ್​ಎಂಎಫ್​ಟಿಎ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ ಎಂದು ಎಫ್​ಎಂಎಫ್​​ಟಿಎ ತನ್ನ ಹೇಳಿಕೆಯನ್ನು ತಿಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...