ಸ್ವಾಮೀಜಿಯನ್ನು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿದ್ದಕ್ಕೆ ಬೇಸರಗೊಂಡ ಕೊಲಂಬೊ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು ಪದವಿ ಪ್ರಧಾನ ಸಮಾರಂಭದಲ್ಲಿ ಸ್ವಾಮೀಜಿ ಮುರುತ್ತೆಟ್ಟುವೆ ಆನಂದ ಥೇರೋರಿಂದ ಪದವಿ ಪ್ರಮಾಣ ಪತ್ರವನ್ನ ಸ್ವೀಕರಿಸದೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಮತ್ತು ಫೈನಾನ್ಸ್ ಟೀಚರ್ಸ್ ಅಸೋಸಿಯೇಷನ್ (ಎಫ್‌ಎಂಎಫ್‌ಟಿಎ) ಕೊಲಂಬೊ ವಿಶ್ವವಿದ್ಯಾಲಯದ ಪದವಿ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತ್ತು.
ಕೊಲಂಬೋ ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ಪೂಜ್ಯ ಮುರುತ್ತೆಟ್ಟುವೆ ಆನಂದ ಥೇರೋರನ್ನು ನೇಮಕ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆಯ ಸಂಕೇತವಾಗಿ ಮೂರು ದಿನಗಳ ಕಾಲ ನಡೆದ ಸಮಾರಂಭದಲ್ಲಿ ಭಾಗವಹಿಸದೇ ಎಫ್‌ಎಂಎಫ್‌ಟಿಎ ಆಕ್ರೋಶ ಹೊರಹಾಕಿದೆ.
ಮುರುತ್ತೆಟ್ಟುವೆ ಆನಂದ ಥೇರೋರನ್ನು ಕುಲಪತಿಯನ್ನಾಗಿ ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುವ ಸಲುವಾಗಿ ಕುಲಪತಿಗಳು ಡಿಸೆಂಬರ್ 17ರಿಂದ 19ರವರೆಗೆ ಭಾಗಿಯಾಗಿದ್ದ ಔಪಚಾರಿಕ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸದೇ ಇರಲು ಎಫ್‌ಎಂಎಫ್‌ಟಿಎ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ ಎಂದು ಎಫ್‌ಎಂಎಫ್‌ಟಿಎ ತನ್ನ ಹೇಳಿಕೆಯನ್ನು ತಿಳಿಸಿದೆ.