ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಅಕ್ಕಿ – 250 ಗ್ರಾಂ, ಕಡಲೆಬೇಳೆ – 250 ಗ್ರಾಂ, ಬೆಲ್ಲ – 300 ಗ್ರಾಂ, ಕೊಬ್ಬರಿ ತುರಿ – 100 ಗ್ರಾಂ, ಏಲಕ್ಕಿ – 2 ಚಮಚ, ಒಣದ್ರಾಕ್ಷಿ – 50 ಗ್ರಾಂ, ಗೋಡಂಬಿ – 50 ಗ್ರಾಂ, ತುಪ್ಪ – 30 ಗ್ರಾಂ, ಹಾಲು – ಅರ್ಧ ಲೀಟರ್, ನೀರು – ಅರ್ಧ ಲೀಟರ್.
ತಯಾರಿಸುವ ವಿಧಾನ:
ಮೊದಲಿಗೆ ಅಕ್ಕಿ ಮತ್ತು ಕಡಲೆಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಒಂದು ಪಾತ್ರೆಗೆ ಹಾಕಿರಿ. ಹಾಲು ಹಾಗೂ ನೀರು ಸೇರಿಸಿ ಒಲೆಯ ಮೇಲಿಟ್ಟು, ಬೇಯಿಸಿರಿ.
ಬೆಲ್ಲವನ್ನು ಪುಡಿ ಮಾಡಿ ಹಾಕಿ. ಏಲಕ್ಕಿ, ದ್ರಾಕ್ಷಿ, ಗೋಡಂಬಿಗಳನ್ನು ಹುರಿದುಕೊಂಡು ಹಾಕಿ. ಕುದಿಯುವಾಗ, ಕೊಬ್ಬರಿ ತುರಿಯನ್ನು ಹಾಕಿರಿ.
ಗಮಗಮ ವಾಸನೆ ಬಂದ ಬಳಿಕ, ಒಲೆಯಿಂದ ಇಳಿಸಿ, ಲೋಟಗಳಿಗೆ ಹಾಕಿ ಕುಡಿಯಲು ಕೊಡಿ.