ಪೊಂಗಲ್ ಎಂದರೆ ಎಲ್ಲರಿಗೂ ಇಷ್ಟ. ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಲು ಬಾಳೆಹಣ್ಣು ಸೇರಿಸಿ. ಮತ್ತಷ್ಟು ಇದರ ಸ್ವಾದ ಹೆಚ್ಚುತ್ತದೆ. ಮಾಡುವ ವಿಧಾನ ಹೀಗಿದೆ.
ಬೇಕಾಗುವ ಸಾಮಾಗ್ರಿಗಳು:
1 ½ ಕಪ್ ಚಿಕ್ಕದಾಗಿ ಕತ್ತರಿಸಿ ಬಾಳೆಹಣ್ಣು, ¼ ಕಪ್- ಹೆಸರುಬೇಳೆ, 1 ಟೇಬಲ್ ಸ್ಪೂನ್- ಕಡಲೆಬೇಳೆ, 1ಕಪ್- ಅಕ್ಕಿ, 1 ಕಪ್- ಹಾಲು, 2 ಕಪ್- ಬೆಲ್ಲದ ಪುಡಿ. 2 ಟೇಬಲ್ ಸ್ಪೂನ್ –ತುಪ್ಪ, 3 ಟೇಬಲ್ ಸ್ಪೂನ್- ಕತ್ತರಿಸಿದ ಗೋಡಂಬಿ. 2 ಟೇಬಲ್ ಸ್ಪೂನ್- ಒಣದ್ರಾಕ್ಷಿ, 4-ಕೇಸರಿದಳ.
ಮಾಡುವ ವಿಧಾನ:
ಮೊದಲಿಗೆ ಪ್ಯಾನ್ ಗೆ ಹೆಸರುಬೇಳೆ ಹಾಕಿ ಪರಿಮಳ ಬರುವವರಗೆ ಹುರಿದುಕೊಳ್ಳಿ. ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ. ಒಂದು ಕುಕ್ಕರ್ ಗೆ ಹೆಸರುಬೇಳೆ, ಅಕ್ಕಿ, ಹಾಲು, 2 ½ ಕಪ್ ನೀರು ಹಾಕಿ 6 ವಿಷಲ್ ಕೂಗಿಸಿಕೊಳ್ಳಿ. ಬೆಲ್ಲದ ಪುಡಿಗೆ ¾ ಕಪ್ ನೀರು ಹಾಕಿ ಹದ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಇದಕ್ಕೆ ಬೇಯಿಸಿಟ್ಟುಕೊಂಡ ಬೇಳೆ, ಅಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ.
ನಂತರ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ ಹುರಿದುಕೊಂಡು ಪೊಂಗಲ್ ಗೆ ಹಾಕಿ, ಕೇಸರಿ ದಳ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ಬಾಳೆ ಹಣ್ಣು ಹಾಕಿ ಮಿಕ್ಸ್ ಮಾಡಿ.