alex Certify ‘ಸ್ವಯಂವರ’ ಕ್ಕೆ ಮಿಕಾ ಸಿಂಗ್ ರೆಡಿ; ಹೆಸರು – ಕೀರ್ತಿ ಗಳಿಸಿರುವ ನನಗೆ ಉತ್ತಮ ವಧು ಸಿಗುವುದು ಖಚಿತ ಎಂದ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ವಯಂವರ’ ಕ್ಕೆ ಮಿಕಾ ಸಿಂಗ್ ರೆಡಿ; ಹೆಸರು – ಕೀರ್ತಿ ಗಳಿಸಿರುವ ನನಗೆ ಉತ್ತಮ ವಧು ಸಿಗುವುದು ಖಚಿತ ಎಂದ ಗಾಯಕ

ಖ್ಯಾತ ಗಾಯಕ ಮಿಕಾ ಸಿಂಗ್ ‘ಸ್ವಯಂವರ’ ಕ್ಕೆ ರೆಡಿಯಾಗಿದ್ದಾರೆ ಅರ್ಥಾತ್ ತಮಗೆ ಸೂಕ್ತ ಕನ್ಯೆಯನ್ನು ಹುಡುಕಿಕೊಳ್ಳಲು ಅವರು ಮುಂದಾಗಿದ್ದು, ಇದಕ್ಕೆ ಸ್ಟಾರ್ ಭಾರತ್ ನ ರಿಯಾಲಿಟಿ ಶೋ ‘ಸ್ವಯಂವರ್: mika di vohti’ ವೇದಿಕೆಯಾಗಲಿದೆ.

ಈ ರಿಯಾಲಿಟಿ ಶೋಗಾಗಿ ಈಗಾಗಲೇ ರಾಜಸ್ಥಾನದ ಜೋಧ್ ಪುರದಲ್ಲಿರುವ ಉಮೈದ್ ಪ್ಯಾಲೇಸ್ ರೆಸಾರ್ಟ್ ಅಂಡ್ ಸ್ಪಾ ದಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಮನರಂಜನಾ ಚಾನೆಲ್ ಸ್ಟಾರ್ ಭಾರತ್ ನಲ್ಲಿ ಇದು ಪ್ರಸಾರವಾಗಲಿದೆ.

ಈ ಹಿಂದೆಯೂ ರಿಯಾಲಿಟಿ ಶೋಗಳಲ್ಲಿ ಸೆಲೆಬ್ರಿಟಿಗಳು ವಧು -ವರ ಹುಡುಕಿಕೊಂಡ ಉದಾಹರಣೆಗಳಿದ್ದು, ಈ ಬಾರಿ ಮಿಕಾ ಸಿಂಗ್ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಮಿಕಾ ಸಿಂಗ್, ನಾನು ಹೆಸರು ಕೀರ್ತಿ ಗಳಿಸಿದ್ದೇನೆ. ಯಾವುದೇ ಯುವತಿ ಜೀವನದಲ್ಲಿ ಸೆಟಲ್ ಆಗಲು ಬಯಸುತ್ತಾರೆ. ಪೋಷಕರು ಸಹ ಇದನ್ನೇ ನಿರೀಕ್ಷೆ ಮಾಡುವ ಕಾರಣ ನನಗೆ ಸೂಕ್ತ ವಧು ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...