alex Certify ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಸಹಾಯ ಮಾಡ್ತಿದ್ದಾನೆ ಈ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಸಹಾಯ ಮಾಡ್ತಿದ್ದಾನೆ ಈ ವಿದ್ಯಾರ್ಥಿ

ಜೈಪುರದಲ್ಲಿ 12ನೇ ತರಗತಿ ಓದುತ್ತಿರುವ ಆರವ್ ಗಾಂಧಿ ಎಂಬ ವಿದ್ಯಾರ್ಥಿ ‘ಪ್ರಾಜೆಕ್ಟ್ ಘರಾನಾ’ ಎಂಬ ಪರಿಕಲ್ಪನೆಯೊಂದನ್ನು ರೂಪಿಸಿದ್ದಾನೆ. ನಿರಾಶ್ರಿತರಿಗೆ ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸುವ ಉದ್ದೇಶದಿಂದ ಸಂಪೂರ್ಣ ಕ್ರಿಯಾತ್ಮಕ ಶಿಪ್ಪಿಂಗ್ ಕಂಟೈನರ್ ಮನೆಯನ್ನು ನಿರ್ಮಿಸಿದ್ದಾನೆ.

500 ನಿರಾಶ್ರಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ ಸಹಾಯ ಮಾಡಲು ಇಂತಹ 100 ಶಿಪ್ಪಿಂಗ್ ಕಂಟೇನರ್ ಮನೆಗಳನ್ನು ನಿರ್ಮಿಸಲು ಆರವ್‌ ಮುಂದಾಗಿದ್ದಾನೆ.

ಸೂರಿಲ್ಲದವರಿಗೆ ಆಸರೆಯಾಗುವ ಈ ಮನೆಗಳು ಸಾಮಾಜಿಕ ಸಮಸ್ಯೆಯನ್ನು ತೊಡೆದು ಹಾಕುವುದರ ಜೊತೆಗೆ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಮರು ಬಳಕೆಗೆ ಯೋಗ್ಯವಾದ ವಸ್ತುಗಳನ್ನೇ ಬಳಸಿ ಮನೆಗಳನ್ನು ನಿರ್ಮಾಣ ಮಾಡಲಾಗ್ತಿದೆ.

ಪ್ರಸ್ತುತ ಆರವ್ ಇನ್ನಷ್ಟು ಶಿಪ್ಪಿಂಗ್ ಕಂಟೈನರ್ ಮನೆಗಳನ್ನು ನಿರ್ಮಿಸಲು ಪಾರ್ಟ್‌ನರ್‌ಗಳ ಹುಡುಕಾಟದಲ್ಲಿದ್ದಾರೆ. ‘ಪ್ರಾಜೆಕ್ಟ್ ಘರಾನಾ’ ಕನಸನ್ನು ನನಸಾಗಿಸುವ ಉದ್ದೇಶ ಹೊಂದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ವಾಸ್ತುಶಿಲ್ಪ ಮತ್ತು ನಿರ್ಮಾಣದ ಬಗ್ಗೆ ಆರವ್‌ಗೆ ಒಲವಿತ್ತು. ಭಾರತದಾದ್ಯಂತ ಮನೆಯೇ ಇಲ್ಲದ ನಿರ್ಗತಿಕರ ಸಮಸ್ಯೆಯ ಬಗ್ಗೆ ಅರಿತ ಆರವ್‌ ಈ ಯೋಜನೆಯೊಂದನ್ನು ಹಮ್ಮಿಕೊಂಡರು. ಭಾರತದಲ್ಲಿರುವ ದುರ್ಬಲ ನಾಗರಿಕರಿಗೆ ಸುಸ್ಥಿರ ಮತ್ತು ಕೈಗೆಟುಕುವ ದರದಲ್ಲಿ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಈ ಯೋಜನೆ.

2021ರ ಸಪ್ಟೆಂಬರ್‌ನಲ್ಲಿ ತಂದೆಯ ಕಾರ್ಖಾನೆಗೆ ಭೇಟಿ ನೀಡಿದ್ದ ಆರವ್‌, ಈ ಪ್ರಕ್ರಿಯೆಯನ್ನು ಆರಂಭಿಸಿದ್ರು. ಹಳೆಯ ಕಂಟೇನರ್ ಅನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಕಚೇರಿ ಸ್ಥಳವಾಗಿ ಪರಿವರ್ತಿಸಿದ್ರು. ಮನೆ ನಿರ್ಮಾಣಕ್ಕೆ ಅದನ್ನೇ ಬಳಸಿಕೊಳ್ಳುವ ಆಲೋಚನೆ ಆರವ್‌ಗಿದೆ.

ಸಾಕಷ್ಟು ಪರಿಶ್ರಮಪಟ್ಟು ಆರವ್‌  ನಾಲ್ಕು ಜನರ ಕುಟುಂಬಕ್ಕಾಗಿ ಮೊದಲ ಕಂಟೇನರ್ ಮನೆಯನ್ನು ಸಿದ್ಧಪಡಿಸಿದ್ದಾರೆ. ಈ ಯಶಸ್ವಿ ಮಾದರಿಯನ್ನು ಪುನರಾವರ್ತಿಸಲು ತಮ್ಮ ಶಾಲೆಯ ಸಮೀಪವಿರುವ ಮಹಾಪುರ ಗ್ರಾಮದಲ್ಲಿ ಕಂಟೈನರ್ ಮನೆಗಳ ಸಮುದಾಯವನ್ನು ನಿರ್ಮಿಸಲು ಆರವ್‌ ಮುಂದಾಗಿದ್ದಾರೆ.

ಇದಕ್ಕಾಗಿ ಆರವ್ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ನಡೆಸಿದ್ದಾನೆ. ‘ಪ್ರಾಜೆಕ್ಟ್ ಘರಾನಾ’ ಗಾಗಿ ಮೂರು ವಾರಗಳಲ್ಲಿ 5 ಲಕ್ಷ ರೂಪಾಯಿ ಸಂಗ್ರಹಿಸಲು  ಯಶಸ್ವಿಯಾಗಿದ್ದಾನೆ. ಆರವ್ ಯೋಜನೆಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಮನ್ನಣೆ ಸಿಕ್ಕಿದೆ. ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ಮಾತನಾಡಲು ಆಹ್ವಾನವೂ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...