alex Certify ಸ್ವಂತ ಖರ್ಚಿನಲ್ಲಿ ‘ರೈತ’ ರನ್ನು ಇಸ್ರೇಲ್ ಪ್ರವಾಸಕ್ಕೆ ಕಳಿಸಲು ಮುಂದಾದ ವಿಧಾನ ಪರಿಷತ್ ಮಾಜಿ ಸದಸ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಖರ್ಚಿನಲ್ಲಿ ‘ರೈತ’ ರನ್ನು ಇಸ್ರೇಲ್ ಪ್ರವಾಸಕ್ಕೆ ಕಳಿಸಲು ಮುಂದಾದ ವಿಧಾನ ಪರಿಷತ್ ಮಾಜಿ ಸದಸ್ಯ…!

ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ತಮ್ಮ ಸ್ವಂತ ಖರ್ಚಿನಲ್ಲಿ ಚಿತ್ರದುರ್ಗ ತಾಲೂಕಿನ ಆಯ್ದ 50 ರೈತರಿಗೆ ಇಸ್ರೇಲ್ ಪ್ರವಾಸ ಕಲ್ಪಿಸಲು ಮುಂದಾಗಿದ್ದಾರೆ.

ಒಂದು ವಾರಗಳ ಕಾಲ ‘ಸುವರ್ಣ ರೈತ – ದುರ್ಗಾ ಟು ಇಸ್ರೇಲ್’ ಹೆಸರಿನಡಿ ಈ ಪ್ರವಾಸ ಕಾರ್ಯಕ್ರಮ ನಡೆಯಲಿದ್ದು, ಪಕ್ಷಾತೀತವಾಗಿ ರೈತರನ್ನು ಆಯ್ಕೆ ಮಾಡುವ ಸಲುವಾಗಿ ಏಳು ಜನರಿರುವ ಸಮಿತಿ ರಚಿಸಲಾಗುತ್ತಿದೆ.

ಮಹಿಳೆಯರನ್ನೂ ಒಳಗೊಂಡಂತೆ 40 ವರ್ಷದೊಳಗಿನ ಐವತ್ತು ರೈತರನ್ನು ಇಸ್ರೇಲ್ ಗೆ ಕರೆದೊಯ್ಯಲಾಗುತ್ತಿದ್ದು, ಶೇಕಡ 20 ಕೃಷಿ ಭೂಮಿಯಲ್ಲೇ ಅದ್ಭುತ ಪ್ರಗತಿ ಸಾಧಿಸಿರುವ ಇಸ್ರೇಲ್ ಕೃಷಿಕರೊಂದಿಗೆ ಭೇಟಿ ಮಾಡಿ ಮಾಹಿತಿ ವಿನಿಮಯ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...