ಪ್ರತಿ ಬಾರಿ ಸ್ಯಾನಿಟೈಸರ್ ನಿಂದ ಕೈ ತೊಳೆದ ಪರಿಣಾಮ ಬೆರಳುಗಳು ತೇವಾಂಶ ಕಳೆದುಕೊಂಡು ಡ್ರೈ ಆಗಿವೆಯೇ. ಕೊರೋನಾ ಮತ್ತೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ನಿಂದ ದೂರವಿರಲು ಸಾಧ್ಯವೇ ಇಲ್ಲ. ಹಾಗಿದ್ದರೆ ಕೈಗಳ ಅಂದ ಮರುಕಳಿಸುವಂತೆ ಮಾಡುವುದು ಹೇಗೆ?
ಪ್ರತಿ ಬಾರಿ ಸೋಪಿನಿಂದ ಕೈತೊಳೆದುಕೊಂಡ ಬಳಿಕ ಸ್ವಚ್ಛ ಬಟ್ಟೆಯಲ್ಲಿ ಒರೆಸಿ. ಮಾಯಿಶ್ಚರೈಸರ್ ಹಚ್ಚಿಕೊಳ್ಳಲು ಮರೆಯದಿರಿ. ಬೆರಳುಗಳ ಸಂದಿಗೂ ಹಚ್ಚಿ. ಮುಂಗೈ ತನಕ ಮಾಯಿಸ್ಚರೈಸರ್ ಹಚ್ಚಿ. ಹೆಚ್ಚು ರಾಸಾಯನಿಕಗಳನ್ನು ಬೆಳೆಸದ ಹರ್ಬಲ್ ಮಾಯಿಸ್ಚರೈಸರ್ ಆಯ್ಕೆ ಮಾಡಿ.
ಅಲೋವೇರಾದಿಂದಲೂ ನಿಮ್ಮ ಕೈಯ ತೇವಾಂಶವನ್ನು ಮರಳಿಸಬಹುದು. ಕೊಬ್ಬರಿ ಎಣ್ಣೆಯನ್ನು ಅಂಗೈಗೆ ಹಾಕಿ ಎರಡೂ ಕೈಯಿಂದ ತಿಕ್ಕಿ. ಬಳಿಕ ಕೈ ಹಾಗೂ ಕಾಲುಗಳಿಗೆ ಹಚ್ಚಿಕೊಳ್ಳಿ. ಇದೇ ರೀತಿ ಆಲಿವ್ ಎಣ್ಣೆಯನ್ನೂ ಪ್ರಯತ್ನಿಸಬಹುದು.
ಓಟ್ಸ್ ಪುಡಿ ಮಾಡಿ ತೆಂಗಿನೆಣ್ಣೆಯೊಂದಿಗೆ ಬೆರೆಸಿ ಬಾಟಲಿಯಲ್ಲಿ ಹಾಕಿಡಿ. ಇದನ್ನು ಪದೇ ಪದೇ ಹಚ್ಚುತ್ತಿದ್ದರೆ ತ್ವಚೆಯ ತೇವಾಂಶ ಹೆಚ್ಚುತ್ತದೆ. ಸ್ನಾನ ಮಾಡುವ ಮುನ್ನ ಜೇನುತುಪ್ಪಕ್ಕೆ ಲಿಂಬೆರಸ ಹಚ್ಚಿ ಕೈ ಕಾಲುಗಳಿಗೆ ಮಸಾಜ್ ಮಾಡಿಕೊಳ್ಳಿ. ಇದರಿಂದಲೂ ನಿಮ್ಮ ತ್ವಚೆಯ ಡ್ರೈ ನೆಸ್ ಕಡಿಮೆಯಾಗುತ್ತದೆ.