alex Certify ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಶಿವಮೊಗ್ಗ ಜನತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಶಿವಮೊಗ್ಗ ಜನತೆ

ಶಿವಮೊಗ್ಗ: ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಬೀದಿ ದೀಪಗಳ ನಿರ್ವಹಣೆ ಅವ್ಯವಸ್ಥೆಯಿಂದ ಕೂಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಲರಾಜ್ ಅರಸ್ ರಸ್ತೆ ಸೇರಿದಂತೆ, ದುರ್ಗಿಗುಡಿ, ಸಿಂಗರ್ ಶೋರೂಂ ವೃತ್ತ ಮುಂತಾದ ಅನೇಕ ಕಡೆಗಳಲ್ಲಿ ಬೀದಿ ದೀಪಗಳ ಮಧ್ಯಂತರ ಭೂಗತ ಕೇಬಲ್ ಗಳನ್ನು, ಪೋಲ್ ಕವರ್ ಗಳನ್ನು, ಕಂಬಗಳ ಅರ್ಥಿಂಗ್ ವೈರ್ ಮಾಡಲಾಗಿದೆ. ಆದರೆ, ಈ ಎಲ್ಲಾ ಕಾಮಗಾರಿಗಳು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದ್ದು, ಅರ್ಥಿಂಗ್ ವೈರ್ ಗಳು ಹಾನಿಗೊಳಗಾಗಿವೆ.

ದುರ್ಗಿಗುಡಿಯ ಸಿಂಗರ್ ಶೋರಂ ವೃತ್ತದಲ್ಲಿ ಮಿನಿ ಹೈಮಾಸ್ಟ್ ನ ಪೆನಾಲ್ ಬೋರ್ಡ್ ಹಾಗೂ ಭೂಗತ ಕೇಬಲ್ ಅನ್ನು ಹಾನಿ ಮಾಡಲಾಗಿದೆ. 100 ಅಡಿ
ರಸ್ತೆಯ ಉಷಾ ನರ್ಸಿಂಗ್ ಹೋಂನಿಂದ ನಿರ್ಮಲಾ ಆಸ್ಪತ್ರೆವರೆಗೆ ಭೂಗತ ಕೇಬಲ್ ಗೆ ಹಾನಿ ಮಾಡಲಾಗಿದೆ.

ಸದರಿ ರಸ್ತೆಗಳು ಹಾಗೂ ವೃತ್ತಗಳು ನಗರ ಪ್ರಮುಖ ರಸ್ತೆ, ವೃತ್ತಗಳಾಗಿದ್ದು, ದಟ್ಟವಾದ ಜನಸಂದಣಿ ಇರುತ್ತದೆ. ಆದರೆ, ಇಲ್ಲಿ ಬೀದಿ ದೀಪಗಳ ಬೆಳಕಿಲ್ಲದೇ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಅಲ್ಲದೇ, ಅನೇಕ ಕಡೆಗಳಲ್ಲಿ ಕೇಬಲ್ ಗಳು ಹೊರಗೆ ಇರುವುದರಿಂದ ವಿದ್ಯುತ್ ಪ್ರವಹಿಸಿ ಶಾಕ್ ಹೊಡೆಯುವ ಸಾಧ್ಯತೆಯೂ ಹೆಚ್ಚಾಗಿದೆ.

ವಿದ್ಯುತ್ ಪರಿಕರಗಳನ್ನು ಕಾಮಗಾರಿ ಕೈಗೊಳ್ಳುವ ಪೂರ್ವದಲ್ಲಿದ್ದ ತಾಂತ್ರಿಕತೆಗೆ ಅನುಗುಣವಾಗಿ ಬದಲಾಯಿಸಬೇಕಾಗಿದೆ. ಆದರೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದ್ಯಾವುದನ್ನೂ ಮಾಡದೇ ನಿರ್ಲಕ್ಷ್ಯ ವಹಿಸಿ ಇಡೀ ಬೀದಿ ದೀಪಗಳ ಕೇಬಲ್ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆಯಿಂದ ಕೂಡಿದೆ.

ಸಾರ್ವಜನಿಕರು ಈ ಬಗ್ಗೆ ಹಲವಾರು ಬಾರಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ದೂರವಾಣಿಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ತುರ್ತಾಗಿ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದ್ದರೂ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಈ ಬಗ್ಗೆ ಸ್ಮಾರ್ಟ್ ಸಿಟಿ ಕಾರ್ಯಪಾಲಕ ಅಭಿಯಂತರರಿಗೆ ತುರ್ತು ಕ್ರಮಕ್ಕೆ ಸೂಚನೆ ನೀಡಿದೆ. ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಪಾಲಿಕೆಯ ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದರೂ ಯಾವುದೇ  ಕ್ರಮವನ್ನು ಸ್ಮಾರ್ಟ್ ಅಧಿಕಾರಿಗಳು ತೆಗೆದುಕೊಂಡಿರುವುದಿಲ್ಲ. ಇದು ಅತ್ಯಂತ ಬೇಜವಾಬ್ದಾರಿ ಎಂದು ಸಾರ್ವಜನಿಕರು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...