alex Certify ಸ್ಮಾರ್ಟ್ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‘ಬಂಪರ್’ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‘ಬಂಪರ್’ ಸುದ್ದಿ

ಫ್ಲಿಪ್​ಕಾರ್ಟ್​ನ ಬಹುನಿರೀಕ್ಷಿತ ಬಿಗ್​ ಬಚತ್​​ ಧಮಾಲ್​ ಸೇಲ್​ ಮಾರ್ಚ್ ನಾಲ್ಕನೇ ತಾರೀಕಿನಿಂದ ಆರಂಭಗೊಳ್ಳಲಿದೆ ಹಾಗೂ ಮಾರ್ಚ್​ ಆರಕ್ಕೆ ಕೊನೆಯಾಗಲಿದೆ ಎಂದು ಆನ್​ಲೈನ್​ ಮಾರುಕಟ್ಟೆ ದೈತ್ಯ ಫ್ಲಿಪ್​ಕಾರ್ಟ್ ಮಾಹಿತಿ ನೀಡಿದೆ. ಈ ಸೇಲ್​ನಲ್ಲಿ ಫ್ಲಿಪ್​ಕಾರ್ಟ್ ತನ್ನ ಗ್ರಾಹಕರಿಗೆ ಸ್ಮಾರ್ಟ್​ಫೋನ್​, ಟಿವಿ, ಬಟ್ಟೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭರ್ಜರಿ ಆಫರ್​ ನೀಡಲಿದೆ.

ಮೊಟೊರೊಲಾ ಎಡ್ಹ್​​ 30 ಪ್ರೋ ಹಾಗೂ ರಿಯಲ್​ ಮಿ 9 ಪ್ರೋ ಮತ್ತು ಐಪೋನ್​ 12 ಸಿರೀಸ್​ ಸೇರಿದಂತೆ ಸಾಕಷ್ಟು ಮೊಬೈಲ್​ ಫೋನ್​ಗಳು ನಿಮಗೆ ಕಡಿಮೆ ದರದಲ್ಲಿ ಸಿಗಲಿವೆ. 80 ಪ್ರತಿಶತದವರೆಗೂ ಎಲೆಕ್ಟ್ರಾನಿಕ್​ ಐಟಂಗಳ ಮೇಲೆ ರಿಯಾಯಿತಿ ಇರಲಿದೆ. ಅಲ್ಲದೇ ಟಿವಿ ಖರೀದಿ ಮಾಡಿದವರಿಗೆ 75 ಪ್ರತಿಶತದವರೆಗೆ ರಿಯಾಯಿತಿ ಜೊತೆಯಲ್ಲಿ ಗ್ರಾಹಕರಿಗೆ ಬ್ಯಾಂಕ್​ಗಳಿಂದಲೂ ನೋ ಕಾಸ್ಟ್​ ಇಎಂಐ ಸೇರಿದಂತೆ ವಿವಿಧ ರಿಯಾಯಿತಿ ಸಿಗಲಿದೆ.

ಬಿಗ್​ ಬಚತ್​ ಧಮಾಲ್​ ಮಾರಾಟದ ಅವಧಿಯಲ್ಲಿ ಕಾಂಬೋ ಆಫರ್​ ಸೇರಿದಂತೆ ವಿವಿಧ ಆಫರ್​ಗಳು ಪ್ರತಿ ದಿನ ಮಧ್ಯರಾತ್ರಿ 12 ಗಂಟೆ, ಬೆಳಗ್ಗೆ 8 ಗಂಟೆ ಹಾಗೂ ಸಂಜೆ 4 ಗಂಟೆಗೆ ಇರಲಿದೆ. ಲೂಟ್​ ಬಜಾರ್​ ಆಫರ್​ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಇರಲಿದ್ದು ಈ ಅವಧಿಯಲ್ಲಿ ವಿವಿಧ ಉತ್ಪನ್ನಗಳು ಅತ್ಯಂತ ಕಡಿಮೆ ದರಕ್ಕೆ ಸಿಗಲಿವೆ.

ಇದು ಮಾತ್ರವಲ್ಲದೇ ಯುಪಿಐ ಪಾವತಿಗಳಿಗೆ 1000 ರೂಪಾಯಿಗಳವರೆಗೆ ರಿಯಾಯಿತಿ, ಐಡಿಎಫ್​ಸಿ ಫಸ್ಟ್​ ಬ್ಯಾಂಕ್ ಹಾಗೂ ಯಸ್​ ಬ್ಯಾಂಕ್ ಕ್ರೆಡಿಟ್​ ಕಾರ್ಡ್ಗಳ ಮೇಲೆ 10 ಪ್ರತಿಶತ ರಿಯಾಯಿತಿ ಸಿಗಲಿದೆ. ಹಳೆಯ ಸ್ಮಾರ್ಟ್​ಪೋನ್​ಗಳನ್ನು ಹೊಸ ಮೊಬೈಲ್​ನೊಂದಿಗೆ ಬದಲಾಯಿಸಿಕೊಳ್ಳುವವರಿಗಾಗಿ ನೋ ಕಾಸ್ಟ್​ ಇಎಂಐ ಆಯ್ಕೆ ಕೂಡ ಲಭ್ಯವಿದೆ.

Realme C11 .7,499 ರೂ ಆರಂಭಿಕ ಬೆಲೆಯಿಂದ ಲಭ್ಯವಿದೆ. Poco C31 ಅನ್ನು ಕೂಡ 7999 ರೂಪಾಯಿ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಮತ್ತು Realme C21Yಗೆ 7749 ರೂಪಾಯಿ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಐಫೋನ್​ 12 ಸಿರೀಸ್​ಗಳು 40999 ರೂಪಾಯಿ ಆರಂಭಿಕ ಬೆಲೆಯಿಂದ ಲಭ್ಯವಿರಲಿದೆ. ಸೇಲ್​ನ ಅವಧಿಯಲ್ಲಿ ಐಫೋನ್​ ಎಸ್​​ಇ 28,999 ರೂಪಾಯಿಗಳಿಗೆ ಹಾಗೂ ಐಫೋನ್​ 12 ಮೊಬೈಲ್​ 53999 ರೂಪಾಯಿಗಳ ಆರಂಭಿಕ ಬೆಲೆಗೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...