alex Certify ಸ್ನೇಹ ಅಂದ್ರೆ ಹೀಗಿರಬೇಕು..! ಶ್ವಾನ – ಸಿಂಹದ ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹ ಅಂದ್ರೆ ಹೀಗಿರಬೇಕು..! ಶ್ವಾನ – ಸಿಂಹದ ಮುದ್ದಾದ ವಿಡಿಯೋ ವೈರಲ್

ಪ್ರಾಣಿಗಳ ವಿಡಿಯೋಗಳನ್ನು ನೋಡಲು ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ..? ನಾಯಿಮರಿಗಳ ಮುದ್ದಾದ ವಿಡಿಯೋಗಳು, ಆನೆಮರಿಗಳು, ಬೆಕ್ಕುಗಳು ಮುಂತಾದವುಗಳ ವಿಡಿಯೋಗಳು ನೋಡಿದ್ರೆ ಹೃದಯ ಕರಗುತ್ತದೆ. ಕೆಲವೊಂದು ನಗುವಂತೆ ಮಾಡುತ್ತವೆ. ಇದೀಗ ನಾಯಿ ಹಾಗೂ ಸಿಂಹದ ಸುಂದರವಾದ ಸ್ನೇಹದ ವಿಡಿಯೋವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಹೌದು, ಸಿಂಹ ಅಂದ್ರೆ ಕ್ರೂರ ಪ್ರಾಣಿ, ಇವುಗಳು ಮಾಂಸಹಾರಿಯಾಗಿದ್ದು ಬೇರೆ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಆದರೆ, ಈ ಮೃಗಕ್ಕೂ ಕೂಡ ಮುಗ್ಧತೆ, ಸ್ನೇಹಪರ ಕಾಳಜಿ ಇದೆ ಅನ್ನೋದನ್ನು ಈ ವಿಡಿಯೋ ಪ್ರೂವ್ ಮಾಡಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸಿಂಹ ಮತ್ತು ನಾಯಿ ಪರಸ್ಪರ ಪ್ರೀತಿಯಿಂದ ಆಟವಾಡುತ್ತಿರುವುದನ್ನು ನೋಡಬಹುದು.

ಚಿಕ್ಕಂದಿನಿಂದಲೇ ಜೊತೆಗೇ ಬೆಳೆದ ಸಿಂಹ ಹಾಗೂ ನಾಯಿ ಬೆಳೆಯುತ್ತಾ ಕೂಡ ಉತ್ತಮ ಸ್ನೇಹಿತರಾಗಿವೆ. ಎರಡೂ ಪ್ರಾಣಿಗಳು ಅವಿನಾಭವ ಬಂಧವನ್ನು ಹಂಚಿಕೊಳ್ಳುತ್ತವೆ. ಮಾತು ಬಾರದ ಮೂಕಪ್ರಾಣಿಗಳಾದ್ರೂ ಕೂಡ ಎರಡೂ ಮುಖಾಮುಖಿ ಭೇಟಿಯಾಗಿ ಕಷ್ಟ-ಸುಖ ವಿಚಾರಿಸಿಕೊಳ್ಳುತ್ತಿರುವಂತೆ ಕಾಣುತ್ತದೆ. ಅಲ್ಲದೆ ನಾಯಿಯ ಕೈಯನ್ನು ಹಿಡಿದ ಸಿಂಹವು ಮುದ್ದಿಸುತ್ತದೆ. ಎರಡೂ ಪ್ರಾಣಿಗಳೂ ಕೂಡ ಒಟ್ಟಿಗೆ ಆಟವಾಡುತ್ತದೆ.

ಸಿಂಹ ಮತ್ತು ಶ್ವಾನದ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಂತಹ ಅದ್ಭುತ ಅನುಬಂಧ.. ಇಬ್ಬರೂ ಒಟ್ಟಿಗೆ ಬೆಳೆದಿದ್ದು, ಈಗ ಉತ್ತಮ ಸ್ನೇಹಿತರಾಗಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, 45 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕಾಡಿನ ರಾಜ ಸಿಂಹ ಹಾಗೂ ಶ್ವಾನದ ಮುದ್ದಾದ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...