alex Certify ʼಸ್ಟ್ರೆಚ್ ಮಾರ್ಕ್ʼ ನಿವಾರಿಸಿಕೊಳ್ಳಬೇಕಾ……? ಪಾಲಿಸಿ ಈ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಟ್ರೆಚ್ ಮಾರ್ಕ್ʼ ನಿವಾರಿಸಿಕೊಳ್ಳಬೇಕಾ……? ಪಾಲಿಸಿ ಈ ಸಲಹೆ

ಹೆರಿಗೆಯಾದ ಬಳಿಕ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಅದನ್ನು ತೆಗೆದು ಹಾಕುವ ಮನೆ ಮದ್ದುಗಳು ಇಲ್ಲಿವೆ.

ದಪ್ಪವಿದ್ದವರು ಸಣ್ಣವರಾದಾಗಲೂ ಕಾಡುವ ಈ ಸ್ಟ್ರೆಚ್ ಮಾರ್ಕ್ ಗಳನ್ನು ತೆಗೆದು ಹಾಕಲು ಇವುಗಳನ್ನು ಬಳಸಿ. ಅಲೋವೇರಾ ಜೆಲ್ ಮತ್ತು ತೆಂಗಿನೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಹರಳೆಣ್ಣೆ ಬೆರೆಸಿ. ಕೊನೆಗೆ ಡೆಟಾಲ್ ಹಾಕಿ ಕಲಕಿ. ಮೃದುವಾಗಿ ಬೆಣ್ಣೆಯ ಹದಕ್ಕೆ ಬರುತ್ತಲೇ ಕ್ರೀಮ್ ನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ಇದನ್ನು ವಾರದ ತನಕ ಬಳಸುತ್ತಿರಬಹುದು.

ಇದರಲ್ಲಿರುವ ಅಲೋವೇರಾ ಜೆಲ್ ಸ್ಟ್ರೆಚ್ ಮಾರ್ಕ್ ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ತೆಂಗಿನೆಣ್ಣೆಯೂ ಉಳಿದ ಮಾರ್ಕ್ ಗಳನ್ನು ತೆಗೆದು ಹಾಕುತ್ತದೆ. ಹರಳೆಣ್ಣೆ ತ್ವಚೆಗೆ ಮಾಯಿಶ್ಚರೈಸ್ ಮಾಡುತ್ತದೆ. ಡೆಟಾಲ್ ಅನಾರೋಗ್ಯ ತಂದಿಡುವ ಸೂಕ್ಷ್ಮ ಜೀವಿಗಳಿಂದ ಮುಕ್ತಿ ದೊರಕಿಸಿ ಕೊಡುತ್ತದೆ. ಹೀಗಾಗಿ ಇದು ಮನೆಯಲ್ಲೇ ತಯಾರಿಸಬಹುದಾದ ಅತ್ಯುತ್ತಮ ಕ್ರೀಮ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...