ಮಿಲ್ಕ್ ಶೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲೂ ನೀರು ಬರುತ್ತದೆ. ತಣ್ಣಗಿನ ಮಿಲ್ಕ್ ಶೇಕ್ ಕುಡಿಯುವುದೇ ಒಂದು ಮಜಾ. ಇಲ್ಲಿ ಸ್ಟ್ರಾಬೆರಿ ಬಳಸಿ ಮಾಡುವ ಮಿಲ್ಕ್ ಶೇಕ್ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
20 ಸ್ಟ್ರಾಬೆರಿ ಹೆಣ್ಣು, 2 ಕಪ್- ತಣ್ಣಗಿನ ಹಾಲು, 4 ಟೇಬಲ್ ಸ್ಪೂನ್- ಸಕ್ಕರೆ.
ಮಾಡುವ ವಿಧಾನ:
ಮೊದಲು ಸ್ಟ್ರಾಬೆರಿಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದು ಇಟ್ಟುಕೊಳ್ಳಿ. ಸ್ಟ್ರಾಬೆರಿ ಹಣ್ಣಿನ ಮೇಲ್ಭಾಗದಲ್ಲಿರುವ ಹಸಿರು ಭಾಗವನ್ನು ಕತ್ತರಿಸಿಕೊಂಡು ಉಳಿದ ಕೆಂಪಗಿನ ಭಾಗವನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಇದನ್ನು ಹಾಕಿ 2 ಕಪ್ ಹಾಲು ಸೇರಿಸಿ ರುಬ್ಬಿಕೊಳ್ಳಿ.
ನಂತರ ಸಕ್ಕರೆ ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಸ್ಟ್ರಾಬೆರಿ ಹಣ್ಣುಗಳು ಸಿಹಿಯಾಗಿದ್ದರೆ ಸಕ್ಕರೆ ಸೇರಿಸುವ ಅಗತ್ಯವಿಲ್ಲ. ನಂತರ ಇದನ್ನು ಒಂದು ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ. ಬೇಕಿದ್ದರೆ ವೆನಿಲ್ಲಾ ಐಸ್ ಕ್ರೀಂ ಅನ್ನು ಈ ಮಿಲ್ಕ್ ಶೇಕ್ ಗೆ ಸೇರಿಸಿದರೆ ರುಚಿ ಮತ್ತಷ್ಟೂ ಹೆಚ್ಚುತ್ತದೆ.